ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಬಳಿಕ ಕ್ರಿಕೆಟ್ | ಬೌಲರ್‌ಗಳಿಗೆ ಲಯಕ್ಕೆ ಮರಳುವ ಸವಾಲು: ಬ್ರೆಟ್ ಲೀ

Last Updated 27 ಮೇ 2020, 10:24 IST
ಅಕ್ಷರ ಗಾತ್ರ

ಮೆಲ್ಬೋರ್ನ್‌: ಲಾಕ್‌ಡೌನ್‌ ಬಳಿಕ ಕ್ರೀಡಾಂಗಣಕ್ಕೆ ಮರಳಿದರೆ ಎಂದಿನ ಲಯ ಕಂಡುಕೊಳ್ಳುವುದು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಒಗ್ಗಿಕೊಳ್ಳುವುದು ಬೌಲರ್‌ಗಳಿಗೆ ಸವಾಲಾಗಲಿದೆಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್‌ ಲೀ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್–19 ಸೋಂಕು ಹರಡುವ ಭೀತಿಯಿಂದಾಗಿ ಇತರ ಕ್ರೀಡೆಗಳಂತೆ ಕ್ರಿಕೆಟ್‌ಅನ್ನೂ ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಆಟಗಾರರು ಕ್ರೀಡಾಂಗಣಗಳಲ್ಲಿ ಅಬ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಹಲವು ದೇಶಗಳಲ್ಲಿ ಲಾಕ್‌ಡೌನ್‌ ಸಡಿಲಿಸಲಾಗಿದೆ. ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.

ಈ ಸಂಬಂಧ ಲೀ ಕ್ರೀಡಾ ವಾಹಿನಿಯೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಲಾಕ್‌ಡೌನ್‌ ಬಳಿಕ ಲಯಕ್ಕೆ ಮರಳುವುದು ಯಾರಿಗೆ ಸವಾಲಾಗುತ್ತದೆ. ಬೌಲರ್‌ಗಳಿಗೇ? ಅಥವಾ ಬ್ಯಾಟ್ಸ್‌ಮನ್‌ಗಳಿಗೋ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗನಿಸುತ್ತದೆ. ಆಟಕ್ಕೆ ವಾಪಸ್‌ ಆಗುವುದು ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಬ್ಬರಿಗೂ ಸವಾಲಾಗುತ್ತದೆ. ಬೌಲರ್‌ಗಳು ಲಯಕ್ಕೆ ಮರಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಏಕೆಂದರೆ, ವೇಗಕ್ಕೆ ಹೊಂದಿಕೊಳ್ಳಲು ಅವರಿಗೆ ಕನಿಷ್ಠ6 ರಿಂದ 8 ವಾರಗಳ ಅಭ್ಯಾಸ ಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ಏಕದಿನ ಅಥವಾ ಟೆಸ್ಟ್‌ ಕ್ರಿಕೆಟ್‌ ಇರಲಿ. ಫಿಟ್‌ನೆಸ್‌ ಜೊತೆಗೆ ಪೂರ್ಣವೇಗದೊಂದಿಗೆ ಪಂದ್ಯದಲ್ಲಿ ಭಾಗವಹಿಸಲು 8 ವಾರಗಳ ಅಭ್ಯಾಸ ಬೇಕಾಗುತ್ತದೆ. ಹಾಗಾಗಿ ಇದು ಬೌಲರ್‌ಗಳಿಗೆ ಸ್ವಲ್ಪ ಕಠಿಣವಾಗಲಿದೆ’ ಎಂದು ಲೀ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT