ಕ್ಯಾನ್‌ಬೆರಾ: ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಅವರು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನೀಡುವ ‘ಅಲನ್ ಬಾರ್ಡರ್‘ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮೊದಲ ಬಾರಿ ಅವರಿಗೆ ಈ ಗೌರವ ಸಂದಿದೆ.

ಆ್ಯಶ್ಲಿ ಗಾರ್ಡನರ್ ಅವರು ಬೆಲಿಂಡಾ ಕ್ಲಾರ್ಕ್ ಪುರಸ್ಕಾರ ಪಡೆಯುವುದರ ಮೂಲಕ ಈ ಪ್ರಶಸ್ತಿಗೆ ಭಾಜನರಾದ ಮೊದಲ ಮೂಲನಿವಾಸಿ ಆಟಗಾರ್ತಿ ಎನಿಸಿದ್ದಾರೆ.

ಕ್ರಿಕೆಟ್‌ನ ಮೂರು ಮಾದರಿಗಳಲ್ಲಿ ಸ್ಟಾರ್ಕ್ ತೋರಿದ ಸಾಮರ್ಥ್ಯವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 22 ವರ್ಷಗಳ ಅವಧಿಯಲ್ಲಿ ಈ ಪುರಸ್ಕಾರ ಪಡೆದ ಐದನೇ ಬೌಲರ್ ಅವರು.

ವರ್ಷದುದ್ದಕ್ಕೂ ಆಟಗಾರರು, ಅಂಪೈರ್‌ಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಮಾಡಿದ ಮತಗಳ ಮೂಲಕ ವಿಜೇತರನ್ನು ನಿರ್ಧರಿಸಲಾಯಿತು. ಇಲ್ಲಿ ನಡೆಯುತ್ತಿರುವ ಮಹಿಳಾ ಆ್ಯಷಸ್ ಟೆಸ್ಟ್‌ನ ಭೋಜನ ವಿರಾಮದ ವೇಳೆ ಈ ಘೋಷಣೆಯನ್ನು ಮಾಡಲಾಯಿತು.

ಸಿಎವರ್ಷದ ಪ್ರಮುಖ ಪ್ರಶಸ್ತಿಗಳ ವಿಜೇತರು

ಪ್ರಶಸ್ತಿ;ಆಟಗಾರ/ಆಟಗಾರ್ತಿ

ಬೆಲಿಂಡಾ ಕ್ಲಾರ್ಕ್;ಆ್ಯಶ್ಲಿ ಗಾರ್ಡನರ್

ಅಲನ್ ಬಾರ್ಡರ್;ಮಿಚೆಲ್ ಸ್ಟಾರ್ಕ್

ಟೆಸ್ಟ್ ಆಟಗಾರ;ಟ್ರಾವಿಸ್ ಹೆಡ್

ಏಕದಿನ ಆಟಗಾರ;ಮಿಚೆಲ್ ಸ್ಟಾರ್ಕ್

ಏಕದಿನ ಆಟಗಾರ್ತಿ;ಅಲಿಸಾ ಹೀಲಿ

ಟಿ20 ಆಟಗಾರ;ಮಿಚೆಲ್ ಮಾರ್ಷ್

ಟಿ20 ಆಟಗಾರ್ತಿ;ಬೆತ್ ಮೂನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.