ಕೋಲ್ಕತ್ತ: ಈಡನ್ ಗಾರ್ಡನ್ ಕ್ರೀಡಾಂಗಣದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಮುಖ್ಯಕಚೇರಿಯು ಭಾನುವಾರದಿಂದ ಏಳು ದಿನಗಳವರೆಗೆ ಮುಚ್ಚಲಿದೆ.

‘ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ತಾತ್ಕಾಲಿಕ ಉದ್ಯೋಗಿಯನ್ನು ಶನಿವಾರ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಸೋಂಕು ಪತ್ತೆಯಾಗಿದೆ’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ ಹೇಳಿದ್ದಾರೆ.

‘ಉದ್ಯೋಗಿಯನ್ನು ಚಾರ್ನೊಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಾರ ಒಮ್ಮೆಯೂ ಅವರು ಸಿಎಬಿ ಕಚೇರಿಗೆ ಭೇಟಿ ನೀಡಿಲ್ಲ. ಆದರೂ ಪ್ರಮುಖ ವೈದ್ಯರು ಹಾಗೂ ವೈದ್ಯಕೀಯ ಸಮಿತಿಯ ಸಲಹೆಯ ಮೇರೆಗೆ ಮುಂದಿನ ಒಂದು ವಾರದವರೆಗೆ ಹೊರಗಿನವರು ಸಿಎಬಿ ಕಚೇರಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ, ಸುರಕ್ಷತಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ನೈರ್ಮಲ್ಯೀಕರಣ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ದಾಲ್ಮಿಯಾ ನುಡಿದರು.

‘ಸಿಎಬಿ ಕಚೇರಿಯನ್ನು ಔಪಚಾರಿಕವಾಗಿ ಬಂದ್ ಮಾಡಲಾಗುವುದು. ಅನಿವಾರ್ಯ ಎನಿಸಿದ ಕೆಲವು ಕಾರ್ಯಗಳನ್ನು ಕೆಲವೇ ಸಿಬ್ಬಂದಿ ನಿರ್ವಹಿಸಲಿದ್ದಾರೆ’ ಎಂದು ದಾಲ್ಮಿಯಾ ಇದೇ ವೇಳೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.