ಬುಧವಾರ, ಮಾರ್ಚ್ 3, 2021
19 °C
ಕೆಎಸ್‌ಸಿಎ 19 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್ ಟೂರ್ನಿ

ಬೋರಾ ಭರ್ಜರಿ ಶತಕ: ಕೆಂಬ್ರಿಡ್ಜ್‌ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭರ್ಜರಿ ಬ್ಯಾಟಿಂಗ್‌ ಮಾಡಿದ ಜಯ್ ಬೋರಾ (167; 134 ಎಸೆತ, 28 ಬೌಂಡರಿ) ಅವರ ಶತಕದ ನೆರವಿನಿಂದ ಕೆಂಬ್ರಿಡ್ಜ್ ಕ್ರಿಕೆಟ್ ಕ್ಲಬ್‌ ತಂಡವು ಕೆಎಸ್‌ಸಿಎ ಗುಂಪು 1,2 ಮತ್ತು 3ರ ಮೂರನೇ ಡಿವಿಷನ್‌ 19 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರೀ ಅಂತರದ ಜಯ ಗಳಿಸಿತು. ಬೆಂಗಳೂರು ಸ್ಪೋರ್ಟ್ಸ್ ಕ್ಲಬ್ ತಂಡವನ್ನು 196 ರನ್‌ಗಳಿಂದ ಸೋಲಿಸಿತು.

ಮತ್ತೊಂದು ಪಂದ್ಯದಲ್ಲಿ ಸ್ವರೂಪ್‌ (107) ಹಾಗೂ ಅರ್ಸಲಾನ್‌ (104) ದಾಖಲಿಸಿದ ಶತಕಗಳು ಜವಾನ್ಸ್ ಕ್ರಿಕೆಟ್ ಕ್ಲಬ್‌ನ ಜಯಕ್ಕೆ ಕಾರಣವಾದವು. ಆ ತಂಡವು ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (2) ಎದುರು 139 ರನ್‌ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರುಗಳು:ಕೆಂಬ್ರಿಡ್ಜ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 425 (ಶಶಾಂಕ್‌ ಕೃಷ್ಣಮೂರ್ತಿ 37, ಜಯ್ ಬೋರಾ 167, ಧೀರಜ್‌ ಸೋಮಯ್ಯ 50, ಆಶೀಸ್ ಮಹೇಶ್‌ 61, ಹರೀಶ್ ಶೆಟ್ಟಿ 25, ಮೊಹಮ್ಮದ್‌ ಎಂ.ಎ.ವಸಾಫ್‌ 21; ಜ್ಯೂಡ್‌ ನೇಥನಿಲ್‌ 92ಕ್ಕೆ 2, ಓಮೇಶ್ ಆರ್‌. 68ಕ್ಕೆ 3). ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 229 (ಓಮೇಶ್ ಆರ್‌. 53, ಲೇಖಿ 53, ವೇದಾಂತ್ ಕಿಣಿ ಔಟಾಗದೆ 70; ಶ್ರೀವತ್ಸ್ ಆರ್‌.ಆಚಾರ್ಯ 48ಕ್ಕೆ 3, ಸಚೇತ್ ಕುಮಾರ್ ಕೋರ್ಡೆಲ್‌ 28ಕ್ಕೆ 2). ಫಲಿತಾಂಶ: ಕೆಂಬ್ರಿಡ್ಜ್ ಕ್ರಿಕೆಟ್ ಕ್ಲಬ್‌ಗೆ 196 ರನ್‌ಗಳ ಜಯ.

ಜವಾನ್ಸ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 335 (ಸ್ವರೂಪ್‌ 107, ಅರ್ಸಲಾನ್ ಎಂ. 104, ಕರಣ್‌ ಯು. 59; ರಯಾನ್‌ ಅಹಮದ್‌ 64ಕ್ಕೆ2, ಮೊಹಮ್ಮದ್ ಸುಫಿಯಾನ್ ಶರೀಫ್ 54ಕ್ಕೆ 4) ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (2): 50 ಓವರ್‌ಗಳಲ್ಲಿ 9 ವಿಕೆಟ್‌ಗೆ 96 (ಕಾರ್ತಿಕ್ ಎಸ್‌.ಯು. 35, ಅತೀಶ್ ಜಯಕುಮಾರ್‌ 25, ಭರತ್‌ ಸಿಂಗ್‌ 27, ಮೊಹಮ್ಮದ್ ಸುಫಿಯಾನ್ ಶರೀಫ್ 31; ವಿನಾಯಕ್ ಹೊಳ್ಳ 38ಕ್ಕೆ3, ಅನೀಶ್ವರ್ ಗೌತಮ್ 20ಕ್ಕೆ 4). ಫಲಿತಾಂಶ: ಜವಾನ್ಸ್ ಕ್ರಿಕೆಟ್ ಕ್ಲಬ್‌ಗೆ 139 ರನ್‌ಗಳ ಜಯ.

ಬೆಂಗಳೂರು ಯುನೈಟೆಡ್ ಕ್ರಿಕೆಟ್‌ ಕ್ಲಬ್‌ (1): 35.1 ಓವರ್‌ಗಳಲ್ಲಿ 155 (ಸಂತೋಷ್ ಬಿ. 27, ವರುಣ್ ವೈ. 34; ವಿಶ್ವಾಸ್‌ ಎ. 53ಕ್ಕೆ 3, ಕುಶಾಲ್ ಗೌಡ 41ಕ್ಕೆ 3). ಮಲ್ಲೇಶ್ವರಂ ಜಿಮ್‌ಖಾನ: 31.2 ಓವರ್‌ಗಳಲ್ಲಿ 7 ವಿಕೆಟ್‌ಗೆ 159 (ತನವ್ ಪ್ರಸಾದ್‌ 51, ವಿನೀತ್ ತೋರಗಲ್‌ 20, ಹರಿ ರಾಜೀವ್‌ 25; ನಿನಾದ್ ರಾಡ್ರಿಗಸ್‌ 48ಕ್ಕೆ 3, ಆದಿತ್ಯ ಆರ್‌. 21ಕ್ಕೆ 2). ಫಲಿತಾಂಶ: ಮಲ್ಲೇಶ್ವರಂ ಜಿಮ್‌ಖಾನ ತಂಡಕ್ಕೆ 3 ವಿಕೆಟ್‌ಗಳ ಗೆಲುವು

ದೂರವಾಣಿ ಕ್ರಿಕೆಟರ್ಸ್ (1): 43.1 ಓವರ್‌ಗಳಲ್ಲಿ 173 (ಅದ್ವೈತ್‌ ಜೈನ್‌ 22, ಜೀವನ್‌ ಬಿ.ಎನ್‌.30, ಪ್ರಣವ್ ಎಸ್‌. 24, ಅಥರ್ವ ಶುಕ್ಲಾ ಔಟಾಗದೆ 22; ಸೈಯದ್ ಜೈನ್‌ 31ಕ್ಕೆ 3). ಮಾಡರ್ನ್ ಕ್ರಿಕೆಟ್‌ ಕ್ಲಬ್‌: 24.2 ಓವರ್‌ಗಳಲ್ಲಿ 2 ವಿಕೆಟ್‌ಗೆ 174 (ಖಾನಿತ್ 63, ಆದರ್ಶ್‌ ಎಂ.ಎ. 49, ಉಜ್ವಲ್ ಎಸ್‌.ಗೌಡ ಔಟಾಗದೆ 31). ಫಲಿತಾಂಶ: ಮಾಡರ್ನ್‌ ಕ್ರಿಕೆಟ್‌ ಕ್ಲಬ್‌ಗೆ 8 ವಿಕೆಟ್‌ಗಳ ಜಯ.

ಸೌತ್ ಎಂಡ್ ಸ್ಪೋರ್ಟ್ಸ್ ಕ್ಲಬ್‌: 45 ಓವರ್‌ಗಳಲ್ಲಿ 211 (ಅಭಿವೃದ್ಧ್ ಬಿ.ಎನ್‌. 52, ಶಶಾಂಕ್ ಬಿ.ಕೆ. 41, ಕುಶಾಲ್ ಎ. 24, ದಾರ್ಶನಿಕ್ ಎಸ್‌.26; ಕೇಶವ ಎಸ್‌. ರಾಘವನ್‌ 33ಕ್ಕೆ 4, ಅಮನ್ ಮಲ್ಯ 45ಕ್ಕೆ 2, ದಿವ್ಯೇಶ್ 21ಕ್ಕೆ 3). ಕ್ಯಾವಿಲಿಯರ್ಸ್ ಕ್ರಿಕೆಟ್ ಕ್ಲಬ್‌: 41 ಓವರ್‌ಗಳಲ್ಲಿ 3 ವಿಕೆಟ್‌ಗೆ 212 (ಪೃಥ್ವಿರಾಜ್ ಟಿ.ಎನ್‌. 90, ಯಶವಂತ್ ಪಟೇಲ್‌ ಔಟಾಗದೆ 87). ಫಲಿತಾಂಶ: ಕ್ಯಾವಿಲಿಯರ್ಸ್ ಕ್ರಿಕೆಟ್ ಕ್ಲಬ್‌ಗೆ 7 ವಿಕೆಟ್‌ ಜಯ.

ವಿಜಯಾ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 308 (ಧೃವ ಪಿ. 84, ವಿಜಯರಾಜ್‌ ಬಿ.41, ಯಶೋವರ್ಧನ್ ಪರಂತಾಪ್‌ 93, ತಿಪ್ಪಾರೆಡ್ಡಿ 28; ಅರ್ಬಾಜ್ ಖಾನ್‌ 64ಕ್ಕೆ 4, ಅಭಿನವ್ ಎಸ್‌. 57ಕ್ಕೆ 2). ಫ್ರೆಂಡ್ಸ್ ಇಲೆವನ್‌ ಕ್ರಿಕೆಟ್ ಕ್ಲಬ್ (ದೊಡ್ಡಬಳ್ಳಾಪುರ): 50 ಓವರ್‌ಗಳಲ್ಲಿ 9 ವಿಕೆಟ್‌ಗೆ 205 (ಡ್ಯಾನಿಶ್ ಅಲ್ತಾಫ್ 30, ಆಯುಷ್ ಪಾಲ್‌ 26, ಅಭಿನಯ್ ಎಸ್‌. 24, ದಿವಿನ್ ಸತೀಶ್ 24; ಅರ್ನಾವ್ ಪಿಲ್ಲುಟ್ಲಾ 21ಕ್ಕೆ 2, ಜಯ್ ದೇಸಾಯಿ 50ಕ್ಕೆ 3). ಫಲಿತಾಂಶ: ವಿಜಯಾ ಕ್ರಿಕೆಟ್‌ ಕ್ಲಬ್‌ಗೆ 103 ರನ್‌ಗಳ ಜಯ.

ಬೆಂಗಳೂರು ಆಕೇಷನಲ್ಸ್: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 307 (ಜೋಹಾನ್ ಜೋಸೆಫ್ 22, ಫೈಜನ್ ಖಾನ್‌ 72, ಪೃಥ್ವಿ ಸದಾನಂದ 43, ಶುಭಂ ಬಿಸ್ವಾಲ್‌ 67, ನಿರಂಜನ 46, ಪಾರ್ಶ್ವನಾಥ ವೃಷಿನ್ ಅರಿಂಜಯ್‌ 36ಕ್ಕೆ 2). ಚಿಂತಾಮಣಿ ಸ್ಪೋರ್ಟ್ಸ್ ಅಸೋಸಿಯೇಷನ್‌ (ಚಿಂತಾಮಣಿ): 41.4 ಓವರ್‌ಗಳಲ್ಲಿ 116 (ಅಖಿಲ್ ಎ. 21, ಪಾರ್ಶ್ವನಾಥ ವೃಷಿನ್ ಅರಿಂಜಯ್‌ 32; ಧೃವ ನಾಯಕ್‌ 20ಕ್ಕೆ 2, ಶುಭಂ ಬಿಸ್ವಾಲ್‌ 11ಕ್ಕೆ 3). ಫಲಿತಾಂಶ: ಬೆಂಗಳೂರು ಆಕೇಷನಲ್ಸ್ ತಂಡಕ್ಕೆ 191 ರನ್‌ಗಳ ಜಯ.

ಕೋಲ್ಸ್ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 202 (ಶ್ರೇಯ್ ಋತ್ವಿಕ್ ಕಬಲು 33, ಆರ್ಯನ್ ಮೇಘಾನಿ 82; ಪ್ರಣವ್ ಅಡಿಗ 23ಕ್ಕೆ 3, ಅರ್ನವ್ ಸೃಜನ್‌ 32ಕ್ಕೆ 3). ದಿ ಬೆಂಗಳೂರು ಕ್ರಿಕೆಟರ್ಸ್‌: 31.3 ಓವರ್‌ಗಳಲ್ಲಿ 4 ವಿಕೆಟ್‌ಗೆ 203 (ಆರ್ಯನ್ ಶ್ರೀವಾತ್ಸವ್‌ 80, ನಿನಾದ್ ಪರಮೇಶ್ವರ 65, ವಿಷ್ಣು ಶ್ರೀನಿವಾಸ ಔಟಾಗದೆ 33; ಪ್ರಣವ್‌ ಬಿ 40ಕ್ಕೆ 2). ಫಲಿತಾಂಶ: ದಿ ಬೆಂಗಳೂರು ಕ್ರಿಕೆಟರ್ಸ್‌ಗೆ ಆರು ವಿಕೆಟ್‌ಗಳ ಜಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು