ಮೈಸೂರು: ಸಂಘಟಿತ ಹೋರಾಟದ ನಡುವೆಯೂ ಇನಿಂಗ್ಸ್ ಹಿನ್ನಡೆ ಅನುಭವಿಸಿದ ಕೆಎಸ್‌ಸಿಎ ಕೋಲ್ಟ್ಸ್ ತಂಡವು ಗುರುವಾರ ಇಲ್ಲಿನ ಎಸ್‌ಜೆಸಿಇ ಮೈದಾನದಲ್ಲಿ ಮುಕ್ತಾಯಗೊಂಡ ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡು ಎದುರಾಳಿ ತಂಡಕ್ಕೆ 3 ಅಂಕ ಬಿಟ್ಟುಕೊಟ್ಟಿತು.
ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ ಪಂದ್ಯದ ಕೊನೆಯ ದಿನವಾದ ಗುರುವಾರ ಇನಿಂಗ್ಸ್ ಮುನ್ನಡೆಯ ಗುರಿಯೊಂದಿಗೆ ಕಣಕ್ಕೆ ಇಳಿದಿದ್ದ ಕೋಲ್ಟ್ಸ್ ತಂಡವು 408 ರನ್‌ಗಳಿಗೆ ಆಲೌಟ್ ಆಯಿತು. ಧೀರಜ್ ಗೌಡ (88; 111 ಎ, 4X13) ಹೋರಾಟ ಪ್ರದರ್ಶಿಸಿದರಾದರೂ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಸಿಗಲಿಲ್ಲ. ಡಿ.ವೈ. ಪಾಟೀಲ ಅಕಾಡೆಮಿಯ ಪಾರ್ಥ್ ಸಹಾನಿ 44 ರನ್‌ಗಳಿಗೆ 4 ವಿಕೆಟ್ ಉರುಳಿಸಿದರು. ಎರಡನೇ ಇನಿಂಗ್ಸ್ ಆರಂಭಿಸಿದ ಡಿ.ವೈ. ಪಾಟೀಲ ಅಕಾಡೆಮಿ 22 ಓವರ್
ಗಳಲ್ಲಿ 110 ರನ್ ಕಲೆಹಾಕಿದ್ದ ವೇಳೆ ಪಂದ್ಯ ಡ್ರಾ ಆಯಿತು.
ಒಡಿಶಾಗೆ ಮೂರು ಅಂಕ: ಇಲ್ಲಿನ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ನಡೆದ ಒಡಿಶಾ ಕ್ರಿಕೆಟ್ ಸಂಸ್ಥೆ ಹಾಗೂ ಬರೋಡಾ ಕ್ರಿಕೆಟ್ ಸಂಸ್ಥೆ ನಡುವಿನ ಪಂದ್ಯವು ಡ್ರಾ ಆಗಿದ್ದು, ಒಡಿಶಾ ಇನಿಂಗ್ಸ್ ಮುನ್ನಡೆಯೊಂದಿಗೆ 3 ಅಂಕ ಸಂಪಾದಿಸಿತು. ಬರೋಡಾ ಪರ ಸುಕೃತ್ ಪಾಂಡೆ (184; 155 ಎ, 4X8) ವಿರೋಚಿತ ಪ್ರದರ್ಶನ ನೀಡಿದರು.
ಸಂಕ್ಷಿಪ್ತ ಸ್ಕೋರ್: ಎಸ್‌ಜೆಸಿಇ ಕ್ರೀಡಾಂಗಣ
ಮೊದಲ ಇನಿಂಗ್ಸ್: ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 106.3 ಓವರ್‌ಗಳಲ್ಲಿ 452; ಕೆಎಸ್‌ಸಿಎ ಕೋಲ್ಟ್ಸ್: 115.1 ಓವರ್‌ಗಳಲ್ಲಿ 408 (ಧೀರಜ್ ಗೌಡ 88, ಪಿ. ಧ್ರುವ್ 34. ಪಾರ್ಥ್ ಸಹಾನಿ 44ಕ್ಕೆ 4)
ಎರಡನೇ ಇನಿಂಗ್ಸ್: ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 22 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 110 (ಪಾರ್ಥ್ ಸಹಾನಿ ಔಟಾಗದೆ 36, ಹರ್ಷಲ್ ಜಾಧವ್ ಔಟಾಗದೆ 58. ಧನುಷ್ ಗೌಡ 12ಕ್ಕೆ 2)
ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ: ಮೊದಲ ಇನಿಂಗ್ಸ್: ಒಡಿಶಾ ಕ್ರಿಕೆಟ್ ಸಂಸ್ಥೆ: 129 ಓವರ್‌ಗಳಲ್ಲಿ 468; ಬರೋಡಾ ಕ್ರಿಕೆಟ್ ಸಂಸ್ಥೆ: 149.4 ಓವರ್‌ಗಳಲ್ಲಿ 404 ( ಸುಕೃತ್ ಪಾಂಡೆ 184, ಅತೀತ್ ಶೇಠ್ 63. ಸುಮಿತ್ ಶರ್ಮಾ 115ಕ್ಕೆ 4)
ಕೆಎಸ್‌ಸಿಎ ಕಾರ್ಯದರ್ಶಿ ತಂಡಕ್ಕೆ ಜಯ
ಬೆಂಗಳೂರು: ಶಿಖರ್ ಶೆಟ್ಟಿ (41ಕ್ಕೆ5) ಅವರ ಬೌಲಿಂಗ್ ಬಲದಿಂದ ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್ ತಂಡವು ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಮುಗಿದ ಪಂದ್ಯದಲ್ಲಿ ಆಂಧ್ರ ಕ್ರಿಕೆಟ್ ತಂಡದ ಎದುರು 9 ರನ್‌ಗಳಿಂದ ಜಯಿಸಿತು.
ಆಲೂರು ಕ್ರೀಡಾಂಗಣ(3):
ಮೊದಲ ಇನಿಂಗ್ಸ್: ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 63.1 ಓವರ್‌ಗಳಲ್ಲಿ 181. ಆಂಧ್ರ: 51 ಒವರ್‌ಗಳಲ್ಲಿ 188.
ಎರಡನೇ ಇನಿಂಗ್ಸ್: ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 76.1 ಓವರ್‌ಗಳಲ್ಲಿ 296. ಆಂಧ್ರ: 78.5 ಓವರ್‌ಗಳಲ್ಲಿ 280 (ಅಶ್ವಿನ್ ಹೆಬ್ಬಾರ್ 85, ಶಿಖರ್ ಶೆಟ್ಟಿ 41ಕ್ಕೆ5, ಶ್ರೇಯಸ್ ಗೋಪಾಲ್ 94ಕ್ಕೆ2, ಅಧೋಕ್ಷ ಹೆಗಡೆ 45ಕ್ಕೆ2)
ಫಲಿತಾಂಶ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌ಗೆ 9 ರನ್‌ಗಳಿಂದ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.