ಮುಂದುವರಿದ ಕೊಹ್ಲಿ–ಪೇನ್‌ ಜಟಾಪಟಿ

7

ಮುಂದುವರಿದ ಕೊಹ್ಲಿ–ಪೇನ್‌ ಜಟಾಪಟಿ

Published:
Updated:
Deccan Herald

ಪರ್ತ್‌: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಆಸ್ಟ್ರೇಲಿಯಾ ತಂಡದ ಸಾರಥ್ಯ ವಹಿಸಿರುವ ಟಿಮ್‌ ಪೇನ್‌ ಅವರ ಜಟಾಪಟಿ ಸೋಮವಾರವೂ ಮುಂದುವರಿಯಿತು.

ಭಾನುವಾರದ ಆಟದ ವೇಳೆ ಮಾತಿನ ಚಕಮಕಿ ನಡೆಸಿದ್ದ ಇವರು ನಾಲ್ಕನೇ ದಿನದಾಟದ ಮೊದಲ ಅವಧಿಯಲ್ಲೂ ವಾಗ್ಯುದ್ಧ ನಡೆಸಿದರು.

‘ನಾನು ನಿನ್ನ ಬಗ್ಗೆ ಏನೂ ಮಾತನಾಡಿಲ್ಲ. ಹೀಗಿದ್ದರೂ ಏಕೆ ಸಿಟ್ಟಾಗುತ್ತಿದ್ದೀಯಾ’ ಎಂದು ಕೊಹ್ಲಿ, ಪೇನ್‌ ಅವರನ್ನು ‍ಪ್ರಶ್ನಿಸಿದರು.

ಇದನ್ನೂ ಓದಿ: ಕೆಟ್ಟ ವರ್ತನೆಯ ಒಳ್ಳೆಯ ಆಟಗಾರ- ಕೊಹ್ಲಿ ಬಗ್ಗೆ ನಟ ನಾಸಿರುದ್ದೀನ್ ಶಾ ಹೇಳಿಕೆ

‘ನಾನು ಶಾಂತಚಿತ್ತದಿಂದಲೇ ಇದ್ದೇನೆ. ನಿನ್ನೆ ಆಕ್ರಮಣಕಾರಿ ಧೋರಣೆಯಿಂದ ವರ್ತಿಸುತ್ತಿದ್ದ ನೀನು ಇಂದೇಕೆ ತುಟಿ ಬಿಚ್ಚುತ್ತಿಲ್ಲ’ ಎಂದು ಪೇನ್‌ ಕೆಣಕಿದರು.

ಆಗ ಅಂಗಳದ ಅಂಪೈರ್‌ ಕ್ರಿಸ್‌ ಗಫಾನಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದರು. ಹೀಗಿದ್ದರೂ ಪೇನ್‌ ಸುಮ್ಮನಾಗಲಿಲ್ಲ. ‘ನಾವು ಗಲಾಟೆ ಮಾಡುತ್ತಿಲ್ಲ. ಮಾತನಾಡಲು ಬಿಡಿ’ ಎಂದರು. ಆಗ ಗಫಾನಿ ‘ನೀವಿಬ್ಬರು ನಾಯಕರು. ಹೀಗೆ ವರ್ತಿಸುವುದು ಸರಿಯಲ್ಲ’ ಎಂದು ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !