ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ಲೀಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಮಧ್ಯಮವೇಗಿ–ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಅಂತಿಮ ಹನ್ನೊಂದರಲ್ಲಿ ಆಡಲು ಇಳಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಬೌಲಿಂಗ್ನಲ್ಲಿ ಶಾರ್ದೂಲ್ ಅತಿ ಸಾಧಾರಣ ಪ್ರದರ್ಶನ ನೀಡಿದರು. ಅಲ್ಲದೇ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಾಯಕ ಶುಭಮನ್ ಗಿಲ್ ಕೂಡ ಎಡವಿದರು ಎಂಬ ಚರ್ಚೆಗಳು ಈಗ ಜೋರಾಗಿವೆ.

ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ನಲ್ಲಿ ಶಾರ್ದೂಲ್ ಅವರಿಗೆ ಮಣೆ ಹಾಕಬೇಕೋ ಬೇಡವೋ ಎಂಬ ಪ್ರಶ್ನೆ ಎದ್ದಿದೆ. ಅವರ ಬದಲಿಗೆ ಸ್ಪಿನ್ನರ್ ಕುಲದೀಪ್ ಯಾದವ್ ಅಥವಾ ಬ್ಯಾಟಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಸ್ಥಾನ ನೀಡಬೇಕು ಎಂಬ ಸಲಹೆಗಳೂ ಕೇಳಿಬರುತ್ತಿವೆ.

ಶಾರ್ದೂಲ್ ಅವರು ಟೆಸ್ಟ್ ತಂಡಕ್ಕೆ 18 ತಿಂಗಳುಗಳ ನಂತರ ಮರಳಿದ್ದರು. 33 ವರ್ಷದ ಶಾರ್ದೂಲ್ ಅವರು ಕಳೆದ ದೇಶಿ ಕ್ರಿಕೆಟ್ ನಲ್ಲಿ ಮುಂಬೈ ತಂಡದ ಪರವಾಗಿ ಉತ್ತಮವಾಗಿ ಆಡಿದ್ದರು. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ 9 ಪಂದ್ಯಗಳಿಂದ 35 ವಿಕೆಟ್ ಗಳಿಸಿದ್ದರು ಮತ್ತು 505 ರನ್ ಹೊಡೆದಿದ್ದರು. ಅದರಿಂದಾಗಿ ಅವರನ್ನು ಟೆಸ್ಟ್ ತಂಡಕ್ಕೆ ಅಜಿತ್ ಅಗರಕರ್ ನೇತೃತ್ವದ ಆಯ್ಕೆ ಸಮಿತಿಯು ಪರಿಗಣಿಸಿತ್ತು.

ಈ ಹಿಂದೆ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಅನುಭವ ಇದ್ದ ಶಾರ್ದೂಲ್ ಅವರ ಸ್ವಿಂಗ್ ಬೌಲಿಂಗ್ ಪ್ರಯೋಜನಕಾರಿಯಾಗಬಹುದು ಎಂಬ ಲೆಕ್ಕಾಚಾರ ಕೂಡ ಇತ್ತು. ಬಹುತೇಕ ಯುವ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಸ್ತುತ ತಂಡಕ್ಕೆ ಶಾರ್ದೂಲ್ ಅನುಭವ ಅನುಕೂಲಕರವಾಗುವ ನಿರೀಕ್ಷೆಯೂ ಇತ್ತು.

ಹೋದ ಬಾರಿ ಆಸ್ಟ್ರೇಲಿಯಾದಲ್ಲಿ ತಮ್ಮ ಪದಾರ್ಪಣೆ ಸರಣಿಯಲ್ಲಿಯೇ ಶತಕ ಹೊಡೆದು ಗಮನ ಸೆಳೆದಿದ್ದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಯವರನ್ನು ಆಯ್ಕೆಗೆ ಪರಿಗಣಿಸದೇ ಶಾರ್ದೂಲ್ಗೆ ಅವಕಾಶ ನೀಡಲಾಗಿತ್ತು. ಶಾರ್ದೂಲ್ ಈ ಹಿಂದೆ ಹಲವು ಪಂದ್ಯಗಳಲ್ಲಿ ತಂಡದ ಗೆಲುವಿನ ರೂವಾರಿಯಾಗಿದ್ದ ಉದಾಹರಣೆಗಳು ಇವೆ. ಆದರೆ ಇಲ್ಲಿ ಅವರ ಆಟ ನಡೆಯಲಿಲ್ಲ. ವಿಕೆಟ್ ಪಡೆಯುವುದಕ್ಕಿಂತಲೂ ಪಂದ್ಯದ ಸ್ಥಿತಿಗೆ ತಕ್ಕಂತೆ ಸ್ವಿಂಗ್, ಶಾಟ್ಪಿಚ್ ಎಸೆತಗಳ ಅಸ್ತ್ರಗಳನ್ನು ಸಮರ್ಪಕವಾಗಿ ಪ್ರಯೋಗಿಸುವಲ್ಲಿ ಶಾರ್ದೂಲ್ ಹಿಂದೆ ಬಿದ್ದರು.

ಇನ್ನೊಂದೆಡೆ ಶಾರ್ದೂಲ್ ಅವರನ್ನು ಬೌಲಿಂಗ್ ಸಾಮರ್ಥ್ಯ ನೋಡಿಯೇ ಆಯ್ಕೆ ಮಾಡಲಾಗಿತ್ತು ಎಂದು ಈಹಿಂದೆ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದರು. ಹಾಗಿದ್ದರೂ ಅವರನ್ನು ಮೊದಲ ಇನಿಂಗ್ಸ್ನಲ್ಲಿ 40ನೇ ಓವರ್ನಲ್ಲಿ ಬೌಲಿಂಗ್ಗೆ ಇಳಿಸಿದ್ದು ಅಚ್ಚರಿ ಮೂಡಿಸದಿರದು. ಆ ಹೊತ್ತಿಗೆ ಚೆಂಡು ಹಳೆಯದಾಗುವುದರಿಂದ ಮಧ್ಯಮವೇಗಿಗೆ ನಿರ್ವಹಣೆ ಸವಾಲಾಗುತ್ತದೆ. ಅದರಿಂದಾಗಿಯೇ ಅವರ ಸ್ವಿಂಗ್ ಎಸೆತಗಳು ಮೊನಚು ಕಳೆದುಕೊಂಡಿದ್ದವು. ಬ್ಯಾಟಿಂಗ್ಗೆ ನೆರವಾಗುತ್ತಿದ್ದ ಪಿಚ್ನಲ್ಲಿ ಅವರು ಮೊದಲ ಇನಿಂಗ್ಸ್ನಲ್ಲಿ ತಮ್ಮ ಮೊದಲ ಆರು ಓವರ್ಗಳಲ್ಲಿ 6.33ರ ಸರಾಸರಿಯಲ್ಲಿ ರನ್ ಕೊಟ್ಟರು. ಎರಡನೇ ಇನಿಂಗ್ಸ್ನಲ್ಲಿ 10 ಓವರ್ಗಳಲ್ಲಿ 5.10ರ ಸರಾಸರಿಯಲ್ಲಿ ರನ್ ನೀಡಿದ್ದರು. ಎರಡು ವಿಕೆಟ್ ಕೂಡ ಪಡೆದಿದ್ದರು. ಆದರೆ ಗಿಲ್ ಅವರು ಠಾಕೂರ್ ಅವರಿಗಿಂತ ತಮ್ಮ ಮುಂಚೂಣಿ ವೇಗಿಗಳ ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದರಿಂದ ಈ ರೀತಿಯಾಗಿರಬಹುದು.

ಆದರೆ ಒಂದೇ ಪಂದ್ಯದ ವೈಫಲ್ಯಕ್ಕೆ ಶಾರ್ದೂಲ್ ಅವರಿಗೆ ದಂಡನೆ ನೀಡುವುದು ಸರಿಯಲ್ಲ ಎಂಬ ಮಾತು ಕೂಡ ಇದೆ. ಆದರೂ ತಂಡವು ಇದಕ್ಕೆ ಮುಂದಾದರೆ ಶಾರ್ದೂಲ್ ಬದಲಿಗೆ 22 ವರ್ಷದ ನಿತೀಶ್ ಮೊದಲ ಆಯ್ಕೆಯಾಗಬಹುದು.

ಇನ್ನೊಂದು ಆಯ್ಕೆಯೆಂದರೆ ಕುಲದೀಪ್ ಯಾದವ್. ಅವರು ಎರಡನೇ ಸ್ಪಿನ್ನರ್ ಆಗಿ ರವೀಂದ್ರ ಜಡೇಜ ಅವರೊಂದಿಗೆ ಕಣಕ್ಕಿಳಿಯಬಹುದು. ಎಜ್ಬಾಸ್ಟನ್ ಪಿಚ್ ಲೀಡ್ಸ್ ಅಂಗಳಕ್ಕಿಂತಲೂ ಹೆಚ್ಚು ಶುಷ್ಕವಾಗಿದೆ. ಇಲ್ಲಿಯೂ ಇಂಗ್ಲೆಂಡ್ನ ಬಲಿಷ್ಠ ಬ್ಯಾಟಿಂಗ್ ಪಡೆಯು ಪಾರಮ್ಯ ಮೆರೆಯುವ ಲಕ್ಷಣಗಳಿವೆ. ಇಂತಹ ಸನ್ನಿವೇಶದಲ್ಲಿ ಎಡಗೈ ಮಣಿಕಟ್ಟಿನ ಮೋಡಿಯ ಸ್ಪಿನ್ನರ್ ಕುಲದೀಪ್ ಪರಿಣಾಮಕಾರಿಯಾಗಬಲ್ಲರು. ಅವರ ಶೈಲಿ ಮತ್ತು ಎಸೆತಗಳನ್ನು ಅಂದಾಜು ಮಾಡುವುದು ಎದುರಾಳಿ ಬ್ಯಾಟರ್ಗಳಿಗೆ ಯಾವಾಗಲೂ ಸವಾಲಾಗಲಿದೆ. ಆದ್ದರಿಂದ ಅವರನ್ನೂ ಆಯ್ಕೆಗೆ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ.

ಸರಣಿ ಆರಂಭಕ್ಕೂ ಮುನ್ನವೇ ವೇಗಿ ಜಸ್ಪ್ರೀತ್ ಬೂಮ್ರಾ ಅವರು ಮೂರು ಪಂದ್ಯಗಳಲ್ಲಿ ಮಾತ್ರ ಆಡುವುದಾಗಿ ತಿಳಿಸಿದ್ದರು. ಹೆಚ್ಚೆಂದರೆ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿಯಬಹುದು. ಕಾರ್ಯೋತ್ತಡ ನಿರ್ವಹಣೆಯ ಅಂಗವಾಗಿ ಅವರಿಗೆ ವಿಶ್ರಾಂತಿ ಅಗತ್ಯವಾಗಿದೆ. ಅದರಿಂದಾಗಿ ಅವರು ಎರಡನೇ ಟೆಸ್ಟ್ನಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಂದೊಮ್ಮೆ ಬೂಮ್ರಾ ವಿಶ್ರಾಂತಿ ತೆಗೆದುಕೊಂಡರೆ ವಿಕೆಟ್ ಗಳಿಸುವ ಸಮರ್ಥ ಬೌಲರ್ ಕುಲದೀಪ್ ಯಾದವ್ ಅವರೇ ಮೊದಲ ಆಯ್ಕೆಯಾಗುತ್ತಾರೆ. ಅವರನ್ನು ಕಣಕ್ಕಿಳಿಸುವುದು ಬುದ್ಧಿವಂತಿಕೆಯ ನಡೆಯೂ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.