ಲಾಹೋರ್: ಎಡಗೈ ಆರಂಭಿಕ ಬ್ಯಾಟರ್ ಬೆನ್ ಡಕೆಟ್ (165) ಬಿರುಸಿನ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯ ಪಂದ್ಯದಲ್ಲಿ ನಿಗದಿತ 50 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 351 ರನ್ಗಳ ಬೃಹತ್ ಮೊತ್ತ ಪೇರಿಸಿದೆ.

ಲಾಹೋರ್ನ ಗಡಾಫಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡಕೆಟ್ ಹಾಗೂ ಇಂಗ್ಲೆಂಡ್ ತಂಡ ನೂತನ ದಾಖಲೆಯನ್ನು ಬರೆದಿದೆ.

ವೈಯಕ್ತಿಕ ಗರಿಷ್ಠ ಮೊತ್ತ:

143 ಎಸೆತಗಳನ್ನು ಎದುರಿಸಿದ ಡಕೆಟ್ 17 ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ನೆರವಿನಿಂದ 165 ರನ್ ಗಳಿಸಿ ಅಬ್ಬರಿಸಿದರು.

ಇದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಆ ಮೂಲಕ ನ್ಯೂಜಿಲೆಂಡ್ನ ನೇಥನ್ ಆಸ್ಟ್ಲೆ ಅವರ ಹೆಸರದಲ್ಲಿದ್ದ ಸುಮಾರು 21 ವರ್ಷದ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

2004ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಆಸ್ಟ್ಲೆ ಅಜೇಯ 145 ರನ್ ಗಳಿಸಿರುವುದು ಈವರೆಗಿನ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿತ್ತು. ಇನ್ನು 2002ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಸಹ 145 ರನ್ ಗಳಿಸಿದ್ದರು.

ಇನ್ನು ಟಾಪ್ 5ರ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ಇದ್ದಾರೆ. 2000ರ ಚಾಂಪಿಯನ್ಸ್ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಂಗೂಲಿ ಅಜೇಯ 141 ರನ್ ಗಳಿಸಿದ್ದರು. 1998ರ ಚೊಚ್ಚಲ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್ 141 ರನ್ ಗಳಿಸಿದ್ದರು.

ಚಾಂಪಿಯನ್ಸ್ ಟ್ರೋಫಿಯಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಸಾಧಕರು:

ಬೆನ್ ಡಕೆಟ್: 165

ನಥನ್ ಆಸ್ಟ್ಲೆ: 145*

ಆ್ಯಂಡಿ ಫ್ಲವರ್: 145

ಸೌರವ್ ಗಂಗೂಲಿ: 141*

ಸಚಿನ್ ತೆಂಡೂಲ್ಕರ್: 141

351: ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತ...

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಎಂಟು ವಿಕೆಟ್ ನಷ್ಟಕ್ಕೆ 351 ರನ್ ಪೇರಿಸಿದೆ. ಇದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ.

2004ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಮೆರಿಕ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 347 ರನ್ ಪೇರಿಸಿರುವುದು ಈವರೆಗಿನ ಗರಿಷ್ಠ ಸಾಧನೆಯಾಗಿತ್ತು. ಇನ್ನು ಕಳೆದ ಚಾಂಪಿಯನ್ಸ್ ಟ್ರೋಫಿಯಲ್ಲಿ (2017) ಭಾರತದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ 338 ರನ್ ಪೇರಿಸಿತ್ತು.

2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕಾ 331 ರನ್ ಗಳಿಸಿರುವುದು ಭಾರತದ ಶ್ರೇಷ್ಠ ಸಾಧನೆಯಾಗಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತ (ಇನಿಂಗ್ಸ್):

ಇಂಗ್ಲೆಂಡ್ 351/8: ಆಸ್ಟ್ರೇಲಿಯಾ ವಿರುದ್ಧ, ಲಾಹೋರ್ (2025)

ನ್ಯೂಜಿಲೆಂಡ್ 347/4 ಅಮೆರಿಕ ವಿರುದ್ಧ, ದಿ ಓವಲ್ (2004)

ಪಾಕಿಸ್ತಾನ 338/4: ಭಾರತ ವಿರುದ್ಧ, ದಿ ಓವಲ್ (2017)

ಭಾರತ 331/7: ದಕ್ಷಿಣ ಆಫ್ರಿಕಾ ವಿರುದ್ಧ, ಕಾರ್ಡಿಫ್ (2013)

ಇಂಗ್ಲೆಂಡ್ 323/8: ದ.ಆಫ್ರಿಕಾ ವಿರುದ್ಧ, ಸೆಂಚುರಿಯನ್ (2009)

.Champions Trophy | AUS vs ENG: ದಾಖಲೆ ಮೊತ್ತ ಬೆನ್ನಟ್ಟಿ ಗೆದ್ದ ಆಸ್ಟ್ರೇಲಿಯಾ.Champions Trophy History | ಭಾರತ-ಪಾಕ್ ಐದು ಬಾರಿ ಮುಖಾಮುಖಿ; ಯಾರಿಗೆ ಮೇಲುಗೈ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.