ದುಬೈ: ಟೀಮ್ ಇಂಡಿಯಾದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ, ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 200 ವಿಕೆಟ್ಗಳ ಸಾಧನೆ ಮಾಡಿದ್ದಾರೆ.

ಆ ಮೂಲಕ ಈ ಸಾಧನೆ ಮಾಡಿದ ಭಾರತದ ಐದನೇ ವೇಗದ ಬೌಲರ್ ಎನಿಸಿದ್ದಾರೆ. ಒಟ್ಟಾರೆಯಾಗಿ ಭಾರತದ ಎಂಟನೇ ಬೌಲರ್ ಆಗಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ 'ಎ' ಗುಂಪಿನಲ್ಲಿ ಇಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಶಮಿ ಈ ಸ್ಮರಣೀಯ ಸಾಧನೆ ಮಾಡಿದ್ದಾರೆ.

ಹಾಗೆಯೇ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಬಳಿಕ ಏಕದಿನದಲ್ಲಿ ವೇಗದಲ್ಲಿ 200 ವಿಕೆಟ್ ಗಳಿಸಿದ ಬೌಲರ್ ಎನಿಸಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಶ್ತಾಕ್ ಅವರೊಂದಿಗೆ ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ಇನ್ನು ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಗಳಿಸಿದ ಬೌಲರ್ ಎಂಬ ಕೀರ್ತಿಗೆ ಶಮಿ (5,126 ಎಸೆತ) ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದವರೇ ಆದ ಮಿಚೆಲ್ ಸ್ಟಾರ್ಕ್ (5,240) ದಾಖಲೆಯನ್ನು ಮುರಿದಿದ್ದಾರೆ.

ಏಕದಿನದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಸಾಧಕರು:

ಅನಿಲ್ ಕುಂಬ್ಳೆ: 334

ಜಾಗವಲ್ ಶ್ರೀನಾಥ್: 315

ಅಜಿತ್ ಅಗರ್ಕರ್: 288

ಜಹೀರ್ ಖಾನ್: 269

ಹರಭಜನ್ ಸಿಂಗ್: 265

ಕಪಿಲ್ ದೇವ್: 253

ರವೀಂದ್ರ ಜಡೇಜ: 226

ಮೊಹಮ್ಮದ್ ಶಮಿ: 200

ಐಸಿಸಿ ಟೂರ್ನಿಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕಟ್ ಸಾಧನೆ...

ಈ ಪಂದ್ಯದಲ್ಲಿ ಶಮಿ ಐದು ವಿಕೆಟ್ಗಳ ಸಾಧನೆ (53ಕ್ಕೆ 5) ಮಾಡಿದರು. ಆ ಮೂಲಕ ಐಸಿಸಿ ಟೂರ್ನಿಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ (60 ವಿಕೆಟ್) ಗಳಿಸಿದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಜಹೀರ್ ಖಾನ್ (59 ವಿಕೆಟ್) ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
.Champions Trophy | IND vs BAN: ಶಮಿ ಬಿರುಗಾಳಿ; ಗಿಲ್ ತಂಗಾಳಿ: ಭಾರತ ಶುಭಾರಂಭ.ಸುಲಭ ಕ್ಯಾಚ್ ಕೈಚೆಲ್ಲಿದ ರೋಹಿತ್; ಅಕ್ಷರ್ಗೆ ಕೈತಪ್ಪಿದ ಹ್ಯಾಟ್ರಿಕ್!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.