IND vs ENG 1st Test: ಸಂಕಷ್ಟದಲ್ಲಿರುವ ಟೀಂ ಇಂಡಿಯಾಗೆ ಕೊಹ್ಲಿ ಆಸರೆ

ಚೆನ್ನೈ: ಇಲ್ಲಿನ ಎಂ.ಸಿ.ಚಿದಾಂಬರಂ ಕ್ರೀಡಾಂಗಣಲದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಮಂಗಳವಾರ ಐದನೇ ದಿನದಾಟ ಆರಂಭಿಸಿದ ಭಾರತಕ್ಕೆ ಶುಭಮನ್ ಗೀಲ್ (50) ಅರ್ಧಶತಕ, ವಿರಾಟ್ ಕೊಹ್ಲಿ ಔಟಾಗದೆ 45 ರನ್ ಗಳಿಸಿ ಆಸರೆಯಾಗಿದ್ದಾರೆ.
15 ರನ್ ಗಳಿಸಿದ್ದ ಚೇತೇಶ್ವರ್ ಪೂಜಾರ ಅವರನ್ನು ಜ್ಯಾಕ್ ಲೀಚ್ ಔಟ್ ಮಾಡಿದ್ದಾರೆ. ರಹಾನೆ 00, ವಾಷಿಂಗ್ಟನ್ ಸುಂದರ್ 00, ರಿಷಬ್ ಪಂತ್ 11 ರನ್ ಗಳಿಸಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಭೋಜನ ವಿರಾಮದ ವೇಳೆಗೆ ಭಾರತ 39 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ ಔಟಾಗದೆ 45, ಆರ್.ಅಶ್ವಿನ್ 2 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ತಂಡ ಗೆಲ್ಲುವಿಗೆ 276 ರನ್‌ಗಳ ಅಗತ್ಯತೆ ಇದೆ.
Lunch on Day 5 of the 1st Test.
India have lost five wickets in the morning session.
Scorecard - https://t.co/VJF6Q62aTS #INDvENG @Paytm pic.twitter.com/x1eWYUxNqH
— BCCI (@BCCI) February 9, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.