ಸೋಮವಾರ, ಜೂನ್ 1, 2020
27 °C

ಕ್ರಿಸ್ ಗೇಲ್‌ಗೆ ಶಿಕ್ಷೆ ಖಚಿತ: ರಿಕಿ ಸ್ಕೆರಿಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಿಂಗ್ಸ್‌ಟನ್: ಹಿರಿಯ ಆಟಗಾರ ರಾಮ್‌ನರೇಶ್ ಸರವಣ್ ಮೇಲೆ ವಾಗ್ದಾಳಿ ನಡೆಸಿದ ’ಬಿಗ್ ಹಿಟ್ಟರ್’ ಕ್ರಿಸ್ ಗೇಲ್ ಅವರು ಶಿಕ್ಷೆಗೆ ಒಳಗಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್‌ ಮುಖ್ಯಸ್ಥ ರಿಕಿ ಸ್ಕೆರಿಟ್ ಹೇಳಿದ್ದಾರೆ. ಆದರೆ ಕ್ರಿಸ್ ಗೇಲ್ ಅವರ ಕ್ರಿಕೆಟ್ ಜೀವನಕ್ಕೆ ತೊಂದರೆಯಾಗುವಂಥ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೆರಿಬಿಯನ್ ಸೂಪರ್ ಲೀಗ್‌ನಲ್ಲಿ ಸೇಂಟ್ ಲೂಸಿಯಾ ಜೂಕ್ಸ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಗೇಲ್‌ ರಾಷ್ಟ್ರೀಯ ತಂಡದ ಸಹ ಆಟಗಾರ ಸರವಣ್ ಅವರನ್ನು ಕೊರೊನಾ ವೈರಸ್‌ಗಿಂತ ಅಪಾಯಕಾರಿ ಎಂದು ಜರೆದಿದ್ದರು. ಜಮೈಕಾ ತಲಾಸ್ ತಂಡದಿಂದ ತಾನು ಹೊರಬೀಳಲು ಸರವಣ್ ಕಾರಣ ಎಂದು ದೂರಿದ್ದರು.

’ವಿವಾದದ ಹಿನ್ನೆಲೆಯಲ್ಲಿ ಗೇಲ್ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್‌ ಆಡಳಿತದವರ ನಡುವೆ ಈಗಾಗಲೇ ಚರ್ಚೆಗಳು ಆಗಿವೆ. ಇದು ಇಬ್ಬರ ಆಂತರಿಕ ವಿಷಯ. ಇದರಿಂದ ಕ್ರಿಸ್ ಗೇಲ್ ಅವರಂಥ ಅದ್ಭುತ ಆಟಗಾರನ ವೃತ್ತಿಜೀವನಕ್ಕೆ ತೊಂದರೆಯಾಗಬಾರದು’ ಎಂದು ಸ್ಕೆರಿಟ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು