ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಇನಿಂಗ್ಸ್‌ ಸೋಲು‍

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌: ಉತ್ತರ ಪ್ರದೇಶ ಜಯಭೇರಿ
Last Updated 1 ಫೆಬ್ರುವರಿ 2020, 13:01 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ತಂಡದವರು ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯಲ್ಲಿ ಉತ್ತರ ಪ್ರದೇಶ ಎದುರು ಇನಿಂಗ್ಸ್‌ ಹಾಗೂ ಎರಡು ರನ್‌ಗಳ ಸೋಲು ಅನುಭವಿಸಿದರು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ಕೊನೆಗೊಂಡ ನಾಲ್ಕು ದಿನಗಳ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕರ್ನಾಟಕ, ಎರಡನೇ ಇನಿಂಗ್ಸ್‌ನಲ್ಲಿ 75 ಓವರ್‌ಗಳಲ್ಲಿ 157 ರನ್‌ಗಳಿಗೆ ಆಲೌಟಾಯಿತು. ಮೊದಲ ಇನಿಂಗ್ಸ್‌ನಲ್ಲಿ 275 ರನ್‌ ಗಳಿಸಿದ್ದ ಆತಿಥೇಯ ತಂಡ ಫಾಲೋಆನ್‌ಗೆ ಒಳಗಾಗಿತ್ತು.

ಶುಕ್ರವಾರದ ಆಟದ ಅಂತ್ಯಕ್ಕೆ ಒಂದು ವಿಕೆಟ್‌ಗೆ 19 ರನ್‌ ಗಳಿಸಿದ್ದ ಕರ್ನಾಟಕ ತಂಡ ಸೋಲು ತಪ್ಪಿಸಲು ದಿನವಿಡೀ ಬ್ಯಾಟ್‌ ಮಾಡಬೇಕಿತ್ತು. ಆದರೆ ಶಿವ ಸಿಂಗ್ (27ಕ್ಕೆ 6) ಅವರ ಪ್ರಭಾವಿ ಬೌಲಿಂಗ್‌ ದಾಳಿಗೆ ತತ್ತರಿಸಿ ಸೋಲಿನ ಹಾದಿ ಹಿಡಿಯಿತು.

ಅಂತಿಮ ದಿನದ ಮೊದಲ ಅವಧಿಯಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡ ತಂಡ ಆಘಾತ ಅನುಭವಿಸಿತು. ಭೋಜನ ವಿರಾಮದ ವೇಳೆಗೆ 5 ವಿಕೆಟ್‌ಗೆ 85 ರನ್‌ ಗಳಿಸಿತ್ತು. ಚಹಾ ವಿರಾಮಕ್ಕೂ ಮುನ್ನ ಇನ್ನುಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡು ಪರಾಭವಗೊಂಡಿತು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಉತ್ತರ ಪ್ರದೇಶ: 140 ಓವರ್‌ಗಳಲ್ಲಿ 434; ಕರ್ನಾಟಕ: 107.5 ಓವರ್‌ಗಳಲ್ಲಿ 275 ಎರಡನೇ ಇನಿಂಗ್ಸ್: ಕರ್ನಾಟಕ 75 ಓವರ್‌ಗಳಲ್ಲಿ 157 (ಬಿ.ಯು.ಶಿವಕುಮಾರ್ 14, ಕಿಶನ್‌ ಬಿದಾರೆ 20, ಲವನೀತ್‌ ಸಿಸೋಡಿಯಾ 38, ಮನೋಜ್‌ ಭಾಂಡಗೆ 40, ವಿ.ವೈಶಾಖ್ 8, ಶಿವ ಸಿಂಗ್ 27ಕ್ಕೆ 6, ಕರಣ್‌ ಶರ್ಮಾ 29ಕ್ಕೆ 2) ಫಲಿತಾಂಶ: ಉತ್ತರ ಪ್ರದೇಶಕ್ಕೆ ಇನಿಂಗ್ಸ್‌ ಹಾಗೂ 2 ರನ್‌ ಜಯ; 7 ಪಾಯಿಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT