ಸಂಕಷ್ಟದಲ್ಲಿ ಆತಿಥೇಯ ಕರ್ನಾಟಕ

7
ಕ್ರಿಕೆಟ್‌: ಮಧ್ಯಪ್ರದೇಶಕ್ಕೆ 255 ರನ್‌ಗಳ ಭರ್ಜರಿ ಮುನ್ನಡೆ

ಸಂಕಷ್ಟದಲ್ಲಿ ಆತಿಥೇಯ ಕರ್ನಾಟಕ

Published:
Updated:
Prajavani

ಹುಬ್ಬಳ್ಳಿ: ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ 23 ವರ್ಷದ ಒಳಗಿನವರ ಕರ್ನಾಟಕ ತಂಡ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮಧ್ಯಪ್ರದೇಶ ಎದುರಿನ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ.

ಇಲ್ಲಿನ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮಧ್ಯ ಪ್ರದೇಶ 95.2 ಓವರ್‌ಗಳಲ್ಲಿ 273 ರನ್‌ ಕಲೆಹಾಕಿತು. ಕರ್ನಾಟಕ ತಂಡ 42.4 ಓವರ್‌ಗಳಲ್ಲಿ 126 ರನ್‌ ಗಳಿಸಿ ಆಲೌಟ್‌ ಆಯಿತು. ಮಧ್ಯಪ್ರದೇಶ ಬುಧವಾರದ ಆಟದಲ್ಲಿ 89 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 244 ರನ್‌ ಗಳಿಸಿತ್ತು.

147 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ಗುರುವಾರದ ಅಂತ್ಯಕ್ಕೆ 29 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 108 ರನ್ ಗಳಿಸಿ, ಒಟ್ಟು ಮುನ್ನಡೆಯನ್ನು 255 ರನ್‌ಗೆ ಹೆಚ್ಚಿಸಿಕೊಂಡಿದೆ. ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬೇಕಾದರೆ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆಯಲ್ಲಿರುವ ರಾಜ್ಯ ತಂಡದ ಬ್ಯಾಟ್ಸ್‌ಮನ್‌ಗಳು ಮಹತ್ವದ ಹಂತದಲ್ಲಿ ಎಡವಿದರು.

ಅಂಕಿತ್‌ ಉಡುಪ, ಸುಜಿತ್‌ ಎನ್‌. ಗೌಡ, ಕಿಶನ್‌ ಎಸ್‌. ಬೆದಾರೆ, ಸುಜಯ್‌ ಸತೇರಿ, ಆದಿತ್ಯ ಸೋಮಣ್ಣ ಎರಡಂಕಿಯ ಮೊತ್ತ ಮುಟ್ಟುವ ಮೊದಲೇ ಪೆವಿಲಿಯನ್‌ ಸೇರಿದರು. ನಿಕಿನ್‌ ಜೋಸ್‌ (29, 59ಎಸೆತ, 4ಬೌಂಡರಿ) ಮತ್ತು ಕೆ.ಎಲ್‌. ಶ್ರೀಜಿತ್‌ (33, 58ಎಸೆತ, 5ಬೌಂಡರಿ) ಮಾತ್ರ ಹೆಚ್ಚು ಹೊತ್ತು ಕ್ರೀಸ್‌ನಲ್ಲಿದ್ದರು.

ರಾಜ್ಯ ತಂಡ 106 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಆರು ವಿಕೆಟ್‌ ಕಳೆದುಕೊಂಡಿತ್ತು. ಕೊನೆಯಲ್ಲಿ ದಿಢೀರ್‌ ಕುಸಿತ ಅನುಭವಿಸಿತು. ಕೊನೆಯ 20 ರನ್‌ ಕಲೆಹಾಕುವಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದೇ ಇದಕ್ಕೆ ಸಾಕ್ಷಿ.

ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ 95.2 ಓವರ್‌ಗಳಲ್ಲಿ 273 (ರಾಹುಲ್‌ ಬಾಥಮ್‌ 44, ರಾಜರ್ಷಿ ಶ್ರೀವಾತ್ಸವ 44; ಮನೋಜ ಬಾಂಢಗೆ 70ಕ್ಕೆ5, ಆದಿತ್ಯ ಸೋಮಣ್ಣ 58ಕ್ಕೆ2) ಹಾಗೂ ಎರಡನೇ ಇನಿಂಗ್ಸ್‌ 29 ಓವರ್‌ಗಳಲ್ಲಿ 2 ವಿಕೆಟ್‌ಗೆ 108 (ನಿಖಿಲ್‌ ಮಿಶ್ರಾ ಬ್ಯಾಟಿಂಗ್‌ 47, ಅಶುತೋಷ್‌ ಶರ್ಮಾ 35; ಎಂ.ಬಿ. ದರ್ಶನ್‌ 18ಕ್ಕೆ1). ಕರ್ನಾಟಕ ಮೊದಲ ಇನಿಂಗ್ಸ್‌ 42.4 ಓವರ್‌ಗಳಲ್ಲಿ 126 (ನಿಕಿನ್‌ ಜೋಸ್‌ 29, ಕೆ.ಎಲ್‌. ಶ್ರೀಜಿತ್‌ 33, ಮನೋಜ ಬಾಂಢಗೆ 17; ರಾಹುಲ್‌ ಬಾಥಮ್‌ 31ಕ್ಕೆ4, ಅಭಯ್‌ ಟಿಪ್ನಿಸ್‌ 13ಕ್ಕೆ5).

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !