ಗುರುವಾರ , ಜೂನ್ 30, 2022
20 °C

NZ vs ENG: ಕಾನ್ವೆ ದ್ವಿಶತಕದ ರಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್ (ಎಪಿ): ಆರಂಭಿಕ ಬ್ಯಾಟ್ಸ್‌ಮನ್ ಡೆವನ್ ಕಾನ್ವೆ ಅಮೋಘ ದ್ವಿಶತಕ ಬಾರಿಸಿದರು. ಆದರೆ, ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಪೇರಿಸಲಿಲ್ಲ.

ಪಂದ್ಯದ ಮೊದಲ ದಿನವಾದ ಬುಧವಾರ ಕಾನ್ವೆ ಏಕಾಂಗಿ ಹೋರಾಟ ಮಾಡಿ ಶತಕ ಗಳಿಸಿ ಕ್ರೀಸ್‌ನಲ್ಲಿದ್ದರು. ಗುರುವಾರ ಕೂಡ ಉತ್ತಮವಾಗಿ ಆಡಿ ದ್ವಿಶತಕದ ಗಡಿ ತಲುಪಿದರು.  ಕಾನ್ವೆ ಮತ್ತು ಹೆನ್ರಿ ನಿಕೊಲ್ಸ್‌ (61; 175ಎ, 4ಬೌಂ) ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 174 ರನ್‌ ಸೇರಿಸಿದರು.  ಕಾನ್ವೆ 347 ಎಸೆತಗಳಲ್ಲಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ದ್ವಿಶತಕ ಪೂರೈಸಿದರು. ತಂಡವು 122.4 ಓವರ್‌ಗಳಲ್ಲಿ 378 ರನ್ ಗಳಿಸಿತು.  ಹೆನ್ರಿ ಔಟಾದ ನಂತರ ಕ್ರೀಸ್‌ಗೆ ಬಂದ ಬ್ಯಾಟ್ಸ್‌ಮನ್‌ಗಳು ಒಂದಂಕಿ ದಾಟಲಿಲ್ಲ.  ಇಂಗ್ಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸಿದರು.  ಕಾನ್ವೆ ರನ್‌ಔಟ್ ಆಗುವುದರೊಂದಿಗೆ ಇನಿಂಗ್ಸ್‌ಗೆ ತೆರೆಬಿತ್ತು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 122.4 ಓವರ್‌ಗಳಲ್ಲಿ 378 (ಡೆವನ್ ಕಾನ್ವೆ 200, ಹೆನ್ರಿ ನಿಕೊಲ್ಸ್‌ 61, ಜೇಮ್ಸ್ ಆ್ಯಂಡರ್ಸನ್ 83ಕ್ಕೆ2, ಒಲಿ ರಾಬಿನ್ಸನ್ 75ಕ್ಕೆ4, ಮಾರ್ಕ್ ವುಡ್ 81ಕ್ಕೆ3) ಇಂಗ್ಲೆಂಡ್:20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 46 (ರೊರಿ ಬರ್ನ್ಸ್ ಬ್ಯಾಟಿಂಗ್ 30, ಜೋ ರೂಟ್ ಬ್ಯಾಟಿಂಗ್ 11)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು