ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಚ್‌ ಬೆಹಾರ್ ಟ್ರೋಫಿ ಕ್ರಿಕೆಟ್‌ ಟೂರ್ನಿ: ವಿಶಾಲ್‌ ಕೈತಪ್ಪಿದ ತ್ರಿಶತಕ

Last Updated 15 ಡಿಸೆಂಬರ್ 2021, 21:52 IST
ಅಕ್ಷರ ಗಾತ್ರ

ಬೆಂಗಳೂರು: ವಿಶಾಲ್ ಒನಟ್‌ (290, 403ಎ, 42 ಬೌಂಡರಿ, 2 ಸಿಕ್ಸರ್‌) ಅವರು ಕೇವಲ 10 ರನ್‌ಗಳಿಂದ ತ್ರಿಶತಕ ತಪ್ಪಿಸಿಕೊಂಡರು. ಅವರು ಹಾಗೂ ಚಿನ್ಮಯ್‌ ಎನ್‌.ಎ. (167) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು 19 ವರ್ಷದೊಳಗಿನವರ ಕೂಚ್‌ ಬೆಹಾರ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಬೃಹತ್ ಮೊತ್ತ ಪೇರಿಸಿತು.

ಆಂಧ್ರಪ್ರದೇಶದ ವಿಜಯನಗರಂನಲ್ಲಿ ಬರೋಡಾ ಎದುರು ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಬುಧವಾರ ಕರ್ನಾಟಕ 6 ವಿಕೆಟ್‌ ಕಳೆದುಕೊಂಡು 607 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಬರೋಡಾ 8 ವಿಕೆಟ್‌ಗೆ 315 ರನ್‌ ಗಳಿಸಿದೆ. ಭವಿಷ್ಯ ಭಾವೇಶ ಪಟೇಲ್‌ ಶತಕ (100) ತಂಡಕ್ಕೆ ನೆರವಾದರು.

ಸಂಕ್ಷಿಪ್ತ ಸ್ಕೋರು
ಕರ್ನಾಟಕ ಮೊದಲ ಇನಿಂಗ್ಸ್:
133.4 ಓವರ್‌ಗಳಲ್ಲಿ 6ಕ್ಕೆ 607 (ವಿಶಾಲ್‌ ಓನಟ್‌ 290, ಚಿನ್ಮಯ್ ಎನ್.ಎ. 167, ಯಶೋವರ್ಧನ್ ಪರಂತಾಪ್‌ 39; ಕರಣ್‌ ಉಮತ್ತ್ 157ಕ್ಕೆ 4).
ಬರೋಡಾ: 135 ಓವರ್‌ಗಳಲ್ಲಿ 8ಕ್ಕೆ 315 (ಭವಿಷ್ಯ ಭಾವೇಶ ಪಟೇಲ್‌ 100; ಪ್ರಿಯಾಂಶು ಮೋಲಿಯಾ 33, ತಸ್ಮಯ್‌ ಬೆಡಾಡೆ 39, ಯತಾರ್ಥ ಗುಂಚಾಲ 44; ಯಶೋವರ್ಧನ್ ಪರಂತಾಪ್‌ 25ಕ್ಕೆ2, ಶಶಿಕುಮಾರ್‌ ಕೆ.82ಕ್ಕೆ 3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT