ಆ ದಿನ ಆರು ವರ್ಷದ ಬಾಲಕ ಅಪಘಾತದಲ್ಲಿ ಬಲಗೈ ಕಳೆದುಕೊಂಡಾಗ ನೋಡಿದವರೆಲ್ಲ ಮರುಗಿದ್ದರು. ಈ ಹುಡುಗನ ಭವಿಷ್ಯ ಹೇಗೆ? ಎಂದು ಆಪ್ತರು ಚಿಂತೆ ಮಾಡಿದ್ದರು. ಆದರೆ ಆ ಬಾಲಕ ಇವತ್ತು ಕ್ರಿಕೆಟ್ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ.

ಒಂದು ಕೈಯಲ್ಲಿಯೇ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುವ ಶಿವಶಂಕರ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ವೇಗವಾಗಿ ಬರುವ ಎಸೆತಗಳನ್ನು ಲೀಲಾಜಾಲವಾಗಿ ಬೌಂಡರಿಗಟ್ಟುವ ಚಾಕಚಕ್ಕತೆ ಅವರಲ್ಲಿದೆ. ಸಿಂಗಲ್ ಮತ್ತು ಡಬಲ್ ರನ್‌ಗಳನ್ನು ಕೂಡ ಕರಾರುವಾಕ್ ಆಗಿ ಗಳಿಸಬಲ್ಲ ಪ್ರತಿಭಾವಂತ. ಎಡಗೈನಲ್ಲಿ ಬೌಲಿಂಗ್ ಕೂಡ ಮಾಡುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನ ಗುಂಟಿಗಾನಹಳ್ಳಿಯ ಕೃಷಿಕ ಕುಟುಂಬದಲ್ಲಿ ಜನಿಸಿದ ಶಿವಶಂಕರ, ಅನೇಕ ಕಷ್ಟಗಳನ್ನು ಎದುರಿಸಿ ಧೈರ್ಯದಿಂದ ಬೆಳೆದರು. ಸದ್ಯ ಬೆಂಗಳೂರಿನ ಆರ್.ಸಿ ಕಾಲೇಜಿನಲ್ಲಿ ಕೊನೆಯ ವರ್ಷದ ಬಿ.ಕಾಂ ಓದುತ್ತಿದ್ದಾರೆ. ಫ್ರತಿ ದಿನ ಆರು ತಾಸು ಕ್ರಿಕೆಟ್ ಅಭ್ಯಾಸ ಮಾಡುವ ಶಿವಶಂಕರ್, ತಮ್ಮ ವಿಭಾಗದ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರ ಆಟವನ್ನು ಶಿವಶಂಕರ್ ಪ್ರೀತಿಸುತ್ತಾರೆ.

ಶಿವಶಂಕರ್ ಅವರ ಕ್ರಿಕೆಟ್ ಆಸಕ್ತಿಯನ್ನು ಗುರುತಿಸಿದವರು ಬೆಂಗಳೂರಿನಲ್ಲಿರುವ ಕೋಚ್ ಇರ್ಫಾನ್ ಸೇಠ್. ಅವರ ಕೆಐಒಸಿಯಲ್ಲಿಯೇ ಶಿವಶಂಕರ್ ಅಭ್ಯಾಸ ಮಾಡುತ್ತಾರೆ. ಕರ್ನಾಟಕ ರಾಜ್ಯ ಅಂಗವಿಕಲ ಕ್ರಿಕೆಟ್ ಸಂಸ್ಥೆಯು ಅವರಿಗೆ ಬೆಂಬಲವಾಗಿ ನಿಂತಿದೆ. ಹರಿಯಾಣದಲ್ಲಿ ನಡೆಯುತ್ತಿರುವ ಅಂಗವಿಕಲರ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.