ಗುರುವಾರ , ಮಾರ್ಚ್ 23, 2023
28 °C

IND vs ENG | ಇದು ಆತಂಕಪಡುವ ಸಮಯವಲ್ಲ, ಆಟ ಇನ್ನೂ ಬಾಕಿ ಇದೆ: ಜೋ ರೂಟ್

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಲಂಡನ್‌: ‘ಇದು ಸೋಲಿನಿಂದ ಆತಂಕಪಡುವ ಸಮಯವಲ್ಲ, ಆಟ ಇನ್ನೂ ಬಾಕಿ ಇದೆ’ ಎಂದು ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಹೇಳಿದ್ದಾರೆ.

ಹೌದು, ಲಾರ್ಡ್ಸ್‌ನಲ್ಲಿ ಸೋಮವಾರ ನಡೆದ ಭಾರತ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 151 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಇದರಿಂದಾಗಿ ತಂಡದ ನಾಯಕ ಜೋ ರೂಟ್ ಅವರು ಸೋಲಿನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ನಮ್ಮ ತಂಡದ ಫೀಲ್ಡಿಂಗ್ ಮತ್ತು ಬೌಲಿಂಗ್ ವಿಭಾಗ ‌ವಿಫಲವಾಯಿತು ಎಂದಿದ್ದಾರೆ.

ಇಂಗ್ಲೆಂಡ್‌ಗೆ ಮೊದಲ ಇನಿಂಗ್ಸ್‌ನಲ್ಲಿ 27 ರನ್‌ಗಳ ಮುನ್ನಡೆ ಬಿಟ್ಟುಕೊಟ್ಟಿದ್ದ ಭಾರತ ನಾಲ್ಕನೇ ದಿನವಾದ ಭಾನುವಾರದ ಅಂತ್ಯಕ್ಕೆ 181 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಸೋಮವಾರ ನಾಲ್ಕನೇ ಓವರ್‌ನಲ್ಲಿ ರಿಷಭ್ ಪಂತ್ ವಿಕೆಟ್ ಕಳೆದುಕೊಂಡಾಗ ಸೋಲಿನ ಸುಳಿಯಲ್ಲಿ ಸಿಲುಕಿತ್ತು.

ಆದರೆ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಮೊಹಮ್ಮದ್ ಶಮಿ ಕ್ರೀಸ್‌ಗೆ ಬಂದು ನಿಧಾನವಾಗಿ ರನ್‌ ಗಳಿಸಲು ತೊಡಗಿದರು. ಇಶಾಂತ್ ಶರ್ಮಾ ಮರಳಿದ ನಂತರ ಜಸ್‌ಪ್ರೀತ್ ಅವರು ಶಮಿ ಜೊತೆಗೂಡಿದರು. ಲಯ ಕಂಡುಕೊಂಡ ನಂತರ ಇಬ್ಬರೂ ಎದುರಾಳಿ ಬೌಲರ್‌ಗಳನ್ನು ನಿರಾತಂಕವಾಗಿ ಎದುರಿಸತೊಡಗಿದರು. ಇಬ್ಬರ ಜೊತೆಯಾಟದಿಂದ 50 ರನ್‌ಗಳು ಸೇರಿದ ಬೆನ್ನಲ್ಲೇ ಶಮಿ ಅರ್ಧಶತಕವನ್ನೂ ಪೂರೈಸಿದರು.

ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 109.3 ಓವರ್‌ಗಳಲ್ಲಿ 298 ರನ್‌ ಗಳಿಸಿತು. 271 ರನ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 51.5 ಓವರ್‌ಗಳಲ್ಲಿ 120 ರನ್‌ ಗಳಿಸಿ ಅಲೌಟ್‌ ಆಯಿತು.

ಶಮಿ ಮತ್ತು ಬೂಮ್ರಾ ಜೊತೆಯಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ರೂಟ್‌, ಗೆಲ್ಲುವ ಅವಕಾಶ ಕೈತಪ್ಪಿದ್ದರಿಂದ ಎಲ್ಲರಿಗೂ ನೋವಾಗುತ್ತಿದೆ. ಇದನ್ನು ಡ್ರೆಸ್ಸಿಂಗ್ ಕೊಠಡಿಯಲ್ಲಿ ಪ್ರತಿಯೊಬ್ಬ ಆಟಗಾರನಂತೆಯೇ ನಾನೂ ಭಾವಿಸುತ್ತೇನೆ ಎಂದಿದ್ದಾರೆ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಆಗಸ್ಟ್ 25ರಂದು ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಇದನ್ನೂ ಓದಿ... ಮಂಗಳೂರು: ಕೋವಿಡ್ ತಗುಲಿರುವ ಆತಂಕ, ದಂಪತಿ ಆತ್ಮಹತ್ಯೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು