ಗುರುವಾರ , ಆಗಸ್ಟ್ 5, 2021
27 °C

ಹರ್ಭಜನ್‌-ಗೀತಾ ಬಸ್ರಾ ದಂಪತಿಗೆ ಗಂಡು ಮಗು ಜನನ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಹಿರಿಯ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಅವರ ಪತ್ನಿ ನಟಿ ಗೀತಾ ಬಸ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎರಡನೇ ಮಗುವಿನ ತಂದೆಯಾದ ಸಂಭ್ರಮದಲ್ಲಿರುವ ಹರ್ಭಜನ್‌ ಈ ವಿಚಾರವನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ.

ʼನಾವು ಹಿಡಿದು ಮುನ್ನಡೆಸಲು ಪುಟ್ಟ ಕೈಗಳ ಆಗಮನವಾಗಿದೆ. ಆತನ ಪ್ರೀತಿ ಮಹೋನ್ನತವಾದುದು. ಚಿನ್ನದಂತೆ ಅಮೂಲ್ಯವಾದುದು. ಇದು ನಮಗೆ ವಿಶೇಷ ಮತ್ತು ಸಿಹಿಯಾದ ಅದ್ಭುತವಾದ ಉಡುಗೊರೆ. ನಮ್ಮ ಹೃದಯಗಳು ತುಂಬಿ ಬಂದಿವೆ. ನಮ್ಮ ಜೀವನ ಪರಿಪೂರ್ಣವಾಗಿದೆ. ಆರೋಗ್ಯಯುತ ಗಂಡು ಮಗು ಕರುಣಿಸಿದ ದೇವರಿಗೆ ಧನ್ಯವಾದ ಹೇಳುತ್ತೇನೆ. ಗೀತಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆʼ ಎಂದು ತಿಳಿಸಿದ್ದಾರೆ.

 

ʼನಾವು ಸಂತೋಷದಲ್ಲಿ ಮುಳುಗಿದ್ದೇವೆ. ನಮಗೆ ನಿರಂತರವಾಗಿ ಪ್ರೀತಿ ಮತ್ತು ಬೆಂಬಲ ನೀಡಿದ ಎಲ್ಲ ಹಿತೈಷಿಗಳಿಗೆ ಕೃತಜ್ಞತೆ ಅರ್ಪಿಸುತ್ತೇವೆʼ ಎಂದೂ ಸಂತಸ ಹಂಚಿಕೊಂಡಿದ್ದಾರೆ.

 

ಗೀತಾ ಮತ್ತು ಹರ್ಭಜನ್‌ 2015ರ ಅಕ್ಟೋಬರ್‌ 29 ರಂದು ವಿವಾಹವಾಗಿದ್ದರು. ಹಿನಯ ಎಂಬ ಹೆಣ್ಣು ಮಗು ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು