ಬುಧವಾರ, ಆಗಸ್ಟ್ 4, 2021
22 °C

ಹಿರಿಯ ಕ್ರಿಕೆಟಿಗ ವಸಂತ್ ರಾಯ್‌ಜಿ ‌ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತದ ಅತಿ ಹಿರಿಯ ಪ್ರಥಮ ದರ್ಜೆ ಕ್ರಿಕೆಟ್ ಆಟಗಾರರಾಗಿದ್ದ ವಸಂತ್‌ ರಾಯ್‌ಜಿ (100) ಶನಿವಾರ ನಸುಕಿನ ಜಾವ ನಿಧನರಾದರು.

‘ದಕ್ಷಿಣ ಮುಂಬೈನ ವಾಲಕೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ನಿದ್ರೆಯಲ್ಲಿದ್ದಾಗಲೇ ಅವರು ನಿಧನರಾಗಿದ್ದಾರೆ’ ಎಂದು ಅವರ ಅಳಿಯ ಸುದರ್ಶನ್‌ ನಾನಾವತಿ ತಿಳಿಸಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಅಂತಿಮ ಸಂಸ್ಕಾರ ಚಂದನವಾಡಿಯ ಚಿತಾಗಾರದಲ್ಲಿ ನಡೆಯಿತು.

ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ವಸಂತ್‌ ಅವರು, 1940ರ ದಶಕದಲ್ಲಿ ಒಂಬತ್ತು ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದರು. ಒಟ್ಟು 277 ರನ್‌ ಕಲೆಹಾಕಿದ್ದರು. 68 ರನ್‌ ಪಂದ್ಯವೊಂದರಲ್ಲಿ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ.

1939ರಲ್ಲಿ ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ ತಂಡದ ಮೂಲಕ ಅವರು ಪದಾರ್ಪಣೆ ಮಾಡಿದ್ದರು. ನಾಗ್ಪುರದಲ್ಲಿ ಸೆಂಟ್ರಲ್‌ ಪ್ರಾವಿನ್ಸ್‌ ಹಾಗೂ ಬಿರಾರ್‌ ವಿರುದ್ಧ ಈ ತಂಡ ಆಡಿತ್ತು. 1941ರಲ್ಲಿ ಮುಂಬೈ ತಂಡಕ್ಕೆ ಪದಾರ್ಪಣೆ ಮಾಡಿದರು.

ಚಾರ್ಟಡ್‌ ಅಕೌಂಟೆಂಟ್‌ ಆಗಿದ್ದ ರಾಯ್‌ಜಿ ಅವರು ಕ್ರಿಕೆಟ್‌ ಇತಿಹಾಸಕಾರರಾಗಿಯೂ ಹೆಸರು ಮಾಡಿದ್ದರು. ದಕ್ಷಿಣ ಮುಂಬೈನ ಬಾಂಬೆ ಜಿಮ್ಖಾನಾದಲ್ಲಿ ಭಾರತ ತಂಡ ತನ್ನ ಮೊದಲ ಟೆಸ್ಟ್‌ ಪಂದ್ಯ ಆಡಿದ ಸಂದರ್ಭದಲ್ಲಿ ರಾಯ್‌ಜಿ ಅವರಿಗೆ 13ರ ಹರೆಯ. 

ರಾಯ್‌ಜಿ ಅವರು 100ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರ ನಿವಾಸಕ್ಕೆ ಹಿರಿಯ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ಆಸ್ಟ್ರೇಲಿಯಾದ ಸ್ಟೀವ್‌ ವಾ ಅವರು ಭೇಟಿ ನೀಡಿ ಶುಭ ಕೋರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು