ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | RCB ಎದುರು CSKಗೆ 6 ವಿಕೆಟ್‌ಗಳ ಜಯ

Published 22 ಮಾರ್ಚ್ 2024, 18:39 IST
Last Updated 22 ಮಾರ್ಚ್ 2024, 18:39 IST
ಅಕ್ಷರ ಗಾತ್ರ

ಚೆನ್ನೈ: ಯುವನಾಯಕ ಋತುರಾಜ್ ಗಾಯಕವಾಡ ಅವರ ನಾಯಕತ್ವದಲ್ಲಿ ಚೊಚ್ಚಲ ಪಂದ್ಯವಾಡಿದ ಚೆನ್ನೈ ಸೂಪರ್ ಕಿಂಗ್ಸ್‌ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿರಾಶೆ ಅನುಭವಿಸಿತು.

ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ತಂಡವು 6 ವಿಕೆಟ್‌ಗಳಿಂದ ಗೆದ್ದಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 173 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಚೆನ್ನೈ ತಂಡವು 18.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 176 ರನ್‌ ಗಳಿಸಿ ಗೆದ್ದಿತು.

ಮಹೇಂದ್ರಸಿಂಗ್ ಧೋನಿ ಅವರು ಈ ಟೂರ್ನಿಯಲ್ಲಿ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ಯುವ ಆಟಗಾರ ಗಾಯಕವಾಡ ತಮ್ಮ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದರು.

ಆರ್‌ಸಿಬಿ ತಂಡದ ಆರಂಭಿಕ ಜೋಡಿ ವಿರಾಟ್ ಕೊಹ್ಲಿ (21; 20ಎ) ಮತ್ತು ನಾಯಕ ಫಫ್ ಡುಪ್ಲೆಸಿ (35; 23ಎ) ಉತ್ತಮ ಆರಂಭ ನೀಡಿದರು. ಆದರೆ ಚೆನ್ನೈ ವೇಗಿ ಮುಸ್ತಫಿಜುರ್ ರೆಹಮಾನ್ (29ಕ್ಕೆ4) ಆರ್‌ಸಿಬಿ ಓಟಕ್ಕೆ ಕಡಿವಾಣ ಹಾಕಿದರು . ಇದರಿಂದಾಗಿ ತಂಡವು 78 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಮಿಂಚಿದ ಅನುಜ್ ರಾವತ್ (48; 25ಎ) ಅವರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಿತು. ಅನುಜ್ ಅವರು ತುಷಾರ್ ದೇಶಪಾಂಡೆ ಅವರ ಒಂದೇ ಓವರ್‌ನಲ್ಲಿ 25 ರನ್‌ ಸಿಡಿಸಿದರು. ಆರನೇ ವಿಕೆಟ್‌ಗೆ ಅವರು ದಿನೇಶ್‌ ಕಾರ್ತಿಕ್ (ಅಜೇಯ 38, 25 ಎಸೆತ) ಜೊತೆ ಅತ್ಯಮೂಲ್ಯ 95 ರನ್ ಸೇರಿಸಿದರು.

ಗುರಿ ಬೆನ್ನಟ್ಟಿದ ಚೆನ್ನೈ ತಂಡದ ಬ್ಯಾಟಿಂಗ್ ಪಡೆ ಸಾಂಘಿಕ ಹೋರಾಟ ನಡೆಸಿತು. ಆರ್‌ಸಿಬಿಯ ಕ್ಯಾಮರಾನ್ ಗ್ರೀನ್ ಒಬ್ಬರೇ 2 ವಿಕೆಟ್ ಗಳಿಸಿದರು. ಉಳಿದಂತೆ ಯಾರ ಬೌಲಿಂಗ್‌ ಕೂಡ ಪರಿಣಾಮಕಾರಿಯಾಗಿರಲಿಲ್ಲ.

ಚೆನ್ನೈ ತಂಡದ ಶಿವಂ ದುಬೆ (ಔಟಾಗದೆ 34) ಮತ್ತು ರವೀಂದ್ರ ಜಡೇಜ (ಅಜೇಯ 25) ಬಿರುಸಿನ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಕೋರ್ ಕಾರ್ಡ್

ರಾಯಲ್‌ ಚಾಲೆಂಜರ್ಸ್ ಬೆಂಗಳೂರು: 6 ವಿಕೆಟ್‌ಗೆ 173 (20 ಓವರ್)

ಕೊಹ್ಲಿ ಸಿ ರವೀಂದ್ರ ಬಿ ಮುಸ್ತಫಿಜುರ್ 21 (20ಎ, 6x1)

ಡು ಪ್ಲೆಸಿ ಸಿ ರವೀಂದ್ರ ಬಿ ಮುಸ್ತಫಿಜುರ್ 35 (23ಎ, 4x8)

ಪಾಟೀದಾರ್ ಸಿ ಧೋನಿ ಬಿ ಮುಸ್ತಫಿಜುರ್ 0 (3ಎ)

ಮ್ಯಾಕ್ಸ್‌ವೆಲ್‌ ಸಿ ಧೋನಿ ಬಿ ಚಾಹರ್ 0 (1ಎ)

ಗ್ರೀನ್ ಬಿ ಮುಸ್ತಫಿಜುರ್‌ 18 (22ಎ, 4x1)

ಅನುಜ್ ರನ್‌ಔಟ್‌ (ಧೋನಿ) 48 (25ಎ, 4x4, 6x3)

ದಿನೇಶ್ ಔಟಾಗದೇ 38 (26ಎ, 4x3, 6x2)

ಇತರೆ: 13 (ಬೈ 1, ಲೆಗ್‌ಬೈ2, ವೈಡ್‌ 10)

ವಿಕೆಟ್ ಪತನ: 1–41 (ಫಫ್‌ ಡುಪ್ಲೆಸಿಸ್‌, 4.3), 2–41 (ರಜತ್ ಪಾಟೀದಾರ್, 4.6), 3–42 (ಗ್ಲೆನ್ ಮ್ಯಾಕ್ಸ್‌ವೆಲ್‌, 5.3), 4–77 (ವಿರಾಟ್ ಕೊಹ್ಲಿ, 11.2), 5–78 (ಕ್ಯಾಮರಾನ್ ಗ್ರೀನ್, 11.4), 6–173 (ಅನುಜ್ ರಾವತ್, 19.6)

ಬೌಲಿಂಗ್‌: ದೀಪಕ್ ಚಾಹರ್ 4–0–37–1, ತುಷಾರ್ ದೇಶಪಾಂಡೆ 4–0–47–0; ಮಹೀಶ ತೀಕ್ಷಣ4–0–36–0; ಮುಸ್ತಫಿಜುರ್ ರೆಹಮಾನ್ 4–0–29–4, ರವೀಂದ್ರ ಜಡೇಜ 4–0–21–0

ಚೆನ್ನೈ ಸೂಪರ್ ಕಿಂಗ್ಸ್‌: 4 ವಿಕೆಟ್‌ಗೆ 176 (18.4 ಓವರ್)

ಋತುರಾಜ್ ಸಿ ಗ್ರೀನ್ ಬಿ ಯಶ್ ದಯಾಳ್ 15 (15ಎ, 4X3)

ರವೀಂದ್ರ ಸಿ ರಜತ್‌ ಬಿ ಕರಣ್ 37 (15ಎ, 4X3, 6X3)

ರಹಾನೆ ಸಿ ಮ್ಯಾಕ್ಸ್‌ವೆಲ್ ಬಿ ಗ್ರೀನ್ 27 (19ಎ, 6X2)

ಡ್ಯಾರಿಲ್ ಮಿಚೆಲ್ 22 (18ಎ)

ಶಿವಂ ದುಬೆ ಔಟಾಗದೇ 34 (28ಎ, 4X4, 6X1)

ರವೀಂದ್ರ ಜಡೇಜ ಔಟಾಗದೇ 25 (17ಎ, 6X1)

ಇತರೆ: 16 (ಬೈ 4, ಲೆಗ್ ಬೈ 4, ವೈಡ್‌ 8)

ವಿಕೆಟ್ ಪತನ: 1–38 (ಋತುರಾಜ್ ಗಾಯಕವಾಡ, 3.6), 2–71 (ರಚಿನ್ ರವೀಂದ್ರ, 6.6), 3–99 (ಅಜಿಂಕ್ಯ ರಹಾನೆ, 10.2), 4–110 (ಡ್ಯಾರಿಲ್ ಮಿಚೆಲ್, 12.3)

ಬೌಲಿಂಗ್: ಮೊಹಮದ್‌ ಸಿರಾಜ್ 4–0–38–0, ಯಶ್ ದಯಾಳ್ 3–0–28–1, ಅಲ್ಜಾರಿ ಜೋಸೆಫ್ 3.4–0–38–0, ಕರಣ್ ಶರ್ಮಾ 2–0–24–1, ಮಯಂಕ್ ದಾಗರ್ 2–0–6–0, ಕ್ಯಾಮರಾನ್ ಗ್ರೀನ್ 3–0–27–2, ಗ್ಲೆನ್ ಮ್ಯಾಕ್ಸ್‌ವೆಲ್ 1–0–7–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT