ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್‌ ಟ್ರೋಫಿ: ಹೈಬ್ರಿಡ್‌ ಮಾದರಿ ಆಯ್ಕೆಯ ಸಾಧ್ಯತೆ

Published 15 ಮಾರ್ಚ್ 2024, 16:23 IST
Last Updated 15 ಮಾರ್ಚ್ 2024, 16:23 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂ‍ಪಿಯನ್ಸ್‌ ಟ್ರೋಫಿಯಲ್ಲಿ ಹೈಬ್ರಿಡ್‌ ಮಾದರಿಯೇ ಭಾರತದ ಮುಂದಿರುವ ಆಯ್ಕೆಯಾಗುವ ಸಾಧ್ಯತೆಯಿದೆ. ಸರ್ಕಾರದ ನೀತಿಗೆ ವಿರುದ್ಧವಾದಲ್ಲಿ ಐಸಿಸಿ ಭಾರತದ ಪಾಲ್ಗೊಳ್ಳುವಿಕೆಯನ್ನು ನಿರ್ಧರಿಸಲಾಗದು ಎಂದು ಐಸಿಸಿಯ ಕಾರ್ಯಕಾರಿ ಮಂಡಳಿಯ ಮೂಲವೊಂದು ತಿಳಿಸಿದೆ.

ಐಸಿಸಿ ಕಾರ್ಯಕಾರಿ ಮಂಡಳಿ ಸಭೆ ದುಬೈನಲ್ಲಿ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿ 2025ರ ಫೆಬ್ರುವರಿ –ಮಾರ್ಚ್‌ನಲ್ಲಿ ನಡೆಯಲಿದೆ. ಚಾಂಪಿಯನ್ಸ್‌ ಟ್ರೋಫಿ ಈ ಸಭೆಯ ಕಾರ್ಯಸೂಚಿಯಲ್ಲಿ ಇರಲಿಲ್ಲ. ಆದರೆ ನೂತನವಾಗಿ ಆಯ್ಕೆಯಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಕ್ವಿ ಅವರು ಈ ಸಂದರ್ಭವನ್ನು ಸಂಬಂಧಿಸಿದಂತೆ ಜಯ್‌ ಶಾ ಮತ್ತು ಐಸಿಸಿಯ ಇತರ ಪ್ರಮುಖರ ಜೊತೆ ಮಾತನಾಡಿ ಭಾರತದ ಪಾಲ್ಗೊಳ್ಳುವಿಕೆಯ ಬಗ್ಗೆ ಆಶ್ವಾಸನೆಯನ್ನು ಪಡೆಯಲು ಮುಂದಾದರು.

ಆದರೆ ಅಂತಿಮವ ನಿರ್ಧಾರವನ್ನು ಟೂರ್ನಿಯು ಸಮೀಪಿಸಿದಾಗ ಕೈಗೊಳ್ಳಲಾಗುತ್ತದೆ. ಜೊತೆಗೆ ಯುಎಇಯನ್ನು ಭಾರತದ ಪಂದ್ಯಗಳಿಗೆ ತಟಸ್ಥ ತಾಣವನ್ನಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗೆಳೆಯಲಾಗದು ಎಂದು ಈ ಬೆಳವಣಿಗೆಯ ಬಗ್ಗೆ ಮಾಹಿತಿಯಿರುವ ಐಸಿಸಿ ಮಂಡಳಿ ಸದಸ್ಯರೊಬ್ಬರು ತಿಳಿಸಿದರು.

ಇತ್ತೀಚಿನ ಕೆಲ ತಿಂಗಳಿಂದ ಇಂಗ್ಲೆಂಡ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ತಂಡಗಳು ಪಾಕಿಸ್ತಾನದಲ್ಲಿ ಆಡಿವೆ. ಭಾರತವೂ, ಆರ್ಥಿಕ ಬಿಕ್ಕಟ್ಟಿಗೆ ಜರ್ಝರಿತವಾಗಿರುವ ಈ ದೇಶಕ್ಕೆ ತೆರಳಬೇಕಾದ ಒತ್ತಡದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT