ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಕ್ರಿಕೆಟ್: ಟಿಮ್ ಪೇನ್ ರಾಜೀನಾಮೆ, ಕಮಿನ್ಸ್ ಮುಂದಿನ ನಾಯಕ?

Last Updated 19 ನವೆಂಬರ್ 2021, 13:42 IST
ಅಕ್ಷರ ಗಾತ್ರ

ಸಿಡ್ನಿ: ಟಿಮ್ ಪೇನ್‌ ರಾಜೀನಾಮೆಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಂದಿನ ನಾಯಕನಾಗಿ ಪ್ಯಾಟ್ ಕಮಿನ್ಸ್ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಆದರೆ ಟೆಸ್ಟ್ ತಂಡದ ಇಬ್ಬರು ನಾಯಕರು ವಿವಾದದ ಹಿನ್ನೆಲೆಯಲ್ಲಿ ಸ್ಥಾನ ತ್ಯಜಿಸಬೇಕಾಗಿ ಬಂದಿರುವ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆ ಕ್ರಿಕೆಟ್ ಆಸ್ಟ್ರೇಲಿಯಾಗೆ ತಲೆನೋವಾಗಲಿದೆ.

ಲೈಂಗಿಕವಾಗಿ ಕೆರಳಿಸುವ ಸಂದೇಶ ಕಳುಹಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಟಿಮ್ ಪೇನ್ ರಾಜೀನಾಮೆ ನೀಡಿದ್ದಾರೆ. ಅವರನ್ನು ನಾಯಕನನ್ನಾಗಿ ನೇಮಕ ಮಾಡುವ ಮುನ್ನ, 2018ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾದ ಕಾರಣ ಸ್ಟೀವ್ ಸ್ಮಿತ್ ಅವರ ಸ್ಥಾನಕ್ಕೆ ಕುತ್ತು ಬಂದಿತ್ತು.

’ಟಿಮ್ ಪೇನ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಮುಂದಿನ ನಾಯಕನನ್ನು ಆರಿಸುವ ಸಂಬಂಧ ರಾಷ್ಟ್ರೀಯ ಆಯ್ಕೆ ಸಮಿತಿಯೊಂದಿಗೆ ಚರ್ಚಿಸಲಾಗುತ್ತಿದೆ‘ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಉಪನಾಯಕ, ವೇಗದ ಬೌಲರ್‌ 28 ವರ್ಷ ವಯಸ್ಸಿನ ಪ್ಯಾಟ್ ಕಮಿನ್ಸ್‌ ಅವರನ್ನು ಮುಂದಿನ ನಾಯಕನಾಗಿ ನೇಮಕವಾಗುವ ಸಾಧ್ಯತೆ ಇದೆ. ಆದರೆ ಆಯ್ಕೆ ಸಮಿತಿ ಇದಕ್ಕೆ ಸಮ್ಮತಿ ಸೂಚಿಸುವುದೇ ಎಂಬುದು ಕುತೂಹಲದ ವಿಷಯ. ಇಂಗ್ಲೆಂಡ್ ಎದುರಿನ ಆ್ಯಷಸ್ ಸರಣಿ ಆರಂಭವಾಗಲು ಕೇವಲ ಮೂರು ವಾರ ಉಳಿದಿರುವುದರಿಂದ ಆಯ್ಕೆ ವಿಷಯ ಕಗ್ಗಂಟಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT