ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ದಾದಾ’ ಸೌರವ್ ಗಂಗೂಲಿ

ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ, ಜುಲೈ 8 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಸೌರವ್ ಗಂಗೂಲಿ ತಮ್ಮ ಆಪ್ತ ವಲಯದಲ್ಲಿ ಮಾತ್ರವಲ್ಲದೆ, ಅಭಿಮಾನಿಗಳಿಂದಲೂ ‘ದಾದಾ’ ಎಂದೇ ಕರೆಯಿಸಿಕೊಳ್ಳುತ್ತಾರೆ. ದಾದಾ 49ನೇ ವರ್ಷಕ್ಕೆ ಕಾಲಿರಿಸುತ್ತಿದ್ದು, ಟೀಂ ಇಂಡಿಯಾವನ್ನು 2000 ದಿಂದ 2005 ರವರೆಗೆ ನಾಯಕನಾಗಿ ಮುನ್ನಡೆಸಿದ್ದರು.

ವಿರೇಂದ್ರ ಸೆಹ್ವಾಗ್ ಅವರ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಗಂಗೂಲಿ ನಿರ್ಧಾರದಿಂದ ಮಹತ್ವದ ಬದಲಾವಣೆಗಳನ್ನು ತಂದಿದ್ದರು.

ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 2001ರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಜಯಗಳಿಸಿತ್ತು.

ಗಂಗೂಲಿಗೆ ‘ದಾದಾ’ ಮಾತ್ರವಲ್ಲದೆ, ‘ಪ್ರಿನ್ಸ್ ಆಫ್ ಕೋಲ್ಕತಾ’, ‘ಗಾಡ್ ಆಫ್ ದಿ ಆಫ್ ಸೈಡ್’, ‘ಕಿಂಗ್ ಆಫ್ ಕಮ್‌ಬ್ಯಾಕ್ಸ್’, ‘ಮಹಾರಾಜ್’, ‘ರಾಯಲ್ ಬೆಂಗಾಲ್ ಟೈಗರ್’ ಎಂಬ ಹೆಸರುಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT