ಬುಧವಾರ, ಆಗಸ್ಟ್ 4, 2021
26 °C

ಲುಂಗಿ ಗಿಡಿಗೆ ಡರೆನ್ ಸಾಮಿ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಿಂಗ್ಸಟನ್: ವರ್ಣಭೇದದ ವಿರುದ್ಧದ  ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌ ಹೋರಾಟದ ಕುರಿತು ದಕ್ಷಿಣ ಆಫ್ರಿಕಾದ ಬೌಲರ್ ಲುಂಗಿ ಗಿಡಿ ನೀಡಿರುವ ಹೇಳಿಕೆಯನ್ನು ವೆಸ್ಟ್ ಇಂಡೀಸ್ ಹಿರಿಯ ಕ್ರಿಕೆಟಿಗ ಡರೆನ್ ಸಾಮಿ ಸ್ವಾಗತಿಸಿದ್ದಾರೆ.

’ಜನಾಂಗೀಯ ದ್ವೇಷದ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಇಡೀ ಜಗತ್ತು ಈಗ ಈ ನೀತಿಯ ವಿರುದ್ಧ ತಳೆದಿರುವ ನಿಲುವಿಗೆ ನಾವೂ ಕೈಜೋಡಿಸಬೇಕು‘ ಎಂದು ಲುಂಗಿ ಗಿಡಿ ಹೇಳಿದ್ದರು. ಇದಕ್ಕೆ ದಕ್ಷಿಣ ಆಫ್ರಿಕಾದ ಕೆಲವು ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಡರೆನ್ ಸಾಮಿ, ’ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌ ಅಭಿಯಾನದಿಂದಾಗಿಯೇ ನಾವು ಇಂದಿಗೂ ಇಲ್ಲಿದ್ದೇವೆ. ನೀವು ಎದ್ದು ನಿಲ್ಲಿ ಸಹೋದರ, ನಾವು ನಿಮ್ಮೊಂದಿಗೆ ಇದ್ದೇವೆ‘ ಎಂದಿದ್ದಾರೆ.

’ನಮ್ಮ ದೇಶವಾಸಿಗಳು ಎಲ್ಲ ರೀತಿಯ ಜನಾಂಗೀಯ ಹಿಂಸೆಯ ವಿರುದ್ಧ ಒಂದಾಗಿ ಧ್ವನಿಯೆತ್ತಬೇಕು. ಆದರೆ ಲುಂಗಿ ಗಿಡಿ ದಕ್ಷಿಣ ಆಫ್ರಿಕಾದಲ್ಲಿ ಶ್ವೇತವರ್ಣಿಯ ರೈತರ ಮೇಲೆ ಆದ ದೌರ್ಜನ್ಯವನ್ನು ಏಕೆ ಖಂಡಿಸಲಿಲ್ಲ.   ಕಪ್ಪು ವರ್ಣಿಯರ ಹಿತಾಸಕ್ತಿಗಾಗಿ ಒಂದಾಗಿ ನಿಲ್ಲುವುದು ಸರಿ. ಆದರೆ ಅದೇ ಸಂದರ್ಭದಲ್ಲಿ ರೈತರನ್ನು ಪ್ರಾಣಿಗಳಂತೆ ಕತ್ತರಿಸಿ ಹಾಕಿದ್ದನ್ನು ಏಕೆ ವಿರೋಧಿಸುವುದಿಲ್ಲ. ಇದೂ ಕೂಡ ಜನಾಂಗೀಯ ಹಿಂಸೆಯಲ್ಲವೇ. ಅವರ ಹೇಳಿಕೆಗೆ ನಮ್ಮ ಸಹಮತವಿಲ್ಲ‘ ಎಂದು ಹಿರಿಯ ಕ್ರಿಕೆಟಿಗ ರೂಡಿ ಸ್ಟೇಯ್ನ್ ಟೀಕಿಸಿದ್ದರು.

’ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ ಅಭಿಯಾನವು ಎಡಪಂಥೀಯ ರಾಜಕೀಯ ಅಭಿಯಾನವಾಗಿದೆ ಎಂದು ಹೇಳಲು ನನಗೆ ವಿಷಾದವೆನಿಸುತ್ತದೆ‘ ಎಂದು ಮಾಜಿ ಕ್ರಿಕೆಟಿಗ ಬೊಯೆ ಡಿಪೆನಾರ್ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ ಈಚೆಗೆ  ಆಫ್ರೊ–ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್‌, ಪೊಲೀಸ್‌ ದೌರ್ಜನ್ಯದಲ್ಲಿ ಸಾವಿಗೀಡಾದ ನಂತರ ವರ್ಣದ್ವೇಷದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ಕ್ರಿಕೆಟ್‌ನಲ್ಲಿಯೂ ಜನಾಂಗೀಯ ದ್ವೇಷದ ಕುರಿತು ಸಾಮಿ, ಮೈಕೆಲ್ ಹೋಲ್ಡಿಂಗ್, ಕ್ರಿಸ್ ಗೇಲ್ ಮತ್ತಿತರರು ಈಚೆಗೆ ಹೇಳಿಕೆಗಳನ್ನು ನೀಡಿದ್ದರು.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು