ಬುಧವಾರ, ಏಪ್ರಿಲ್ 14, 2021
31 °C

ವಿಜಯ್ ಹಜಾರೆ ಟ್ರೋಫಿ: ಪಡಿಕ್ಕಲ್ ಅಮೋಘ ಸಾಧನೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

DH File

ನವದೆಹಲಿ: ಪಾಲಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ, ಕೇರಳ ತಂಡವನ್ನು ಮಣಿಸಿದೆ.

ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಮತ್ತು ಆರ್. ಸಮರ್ಥ್ ಜತೆಯಾಟ ರಾಜ್ಯ ತಂಡಕ್ಕೆ ಗೆಲುವು ತಂದುಕೊಟ್ಟಿದೆ.

ಅದರಲ್ಲೂ ರಾಜ್ಯದ ಭರವಸೆಯ ಕ್ರಿಕೆಟಿಗ ದೇವದತ್ತ ಪಡಿಕ್ಕಲ್, ಸತತ ನಾಲ್ಕು ಬಾರಿಯ ಪಂದ್ಯಗಳಲ್ಲಿ ಕೂಡ ಶತಕ ಬಾರಿಸಿ, ವಿಶೇಷ ದಾಖಲೆ ಸೃಷ್ಟಿಸಿದ್ದಾರೆ.

ಕೇರಳ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಪ್ರಸ್ತುತ ಸರಣಿಯಲ್ಲಿ ಇದು ಅವರ ನಾಲ್ಕನೇ ಸೆಂಚುರಿಯಾಗಿದೆ. ಕಳೆದ ವರ್ಷ ಐಪಿಎಲ್ ಕ್ರಿಕೆಟ್ ಪಂದ್ಯಾಟದ ಮೂಲಕ ಬೆಳಕಿಗೆ ಬಂದಿರುವ ಕ್ರಿಕೆಟ್ ಪ್ರತಿಭೆ ಪಡಿಕ್ಕಲ್, ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ರಾಜ್ಯ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ವಿಜಯ್ ಹಜಾರೆ ಟ್ರೋಫಿ ಸರಣಿಯಲ್ಲಿ ಒಡಿಶಾ ತಂಡದ ವಿರುದ್ಧ ಪಡಿಕ್ಕಲ್ 152, ಕೇರಳ ತಂಡದ ವಿರುದ್ಧ 126 ಮತ್ತು ರೈಲ್ವೇ ತಂಡದ ವಿರುದ್ಧ 145 ರನ್ ಗಳಿಸಿ ಮಿಂಚಿದ್ದರು.

ಸೋಮವಾರದ ಪಂದ್ಯದಲ್ಲಿ ಕೂಡ ಕೇರಳ ತಂಡದ ವಿರುದ್ಧ ಪಡಿಕ್ಕಲ್ 119 ಎಸೆತಗಳಲ್ಲಿ 101 ರನ್ ಗಳಿಸಿ ಅಚ್ಚರಿ ಮೂಡಿಸಿದ್ದಾರೆ. ಜತೆಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಖ್ಯಾತಿಗೂ ಪಡಿಕ್ಕಲ್ ಪಾತ್ರರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು