ಭಾನುವಾರ, ಮೇ 16, 2021
22 °C

ಧೋನಿ ತಂದೆ–ತಾಯಿ ಆರೋಗ್ಯ ಸ್ಥಿರ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ : ಕೊರೊನಾ ಸೋಂಕು ತಗುಲಿರುವ ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಅವರ ತಂದೆ–ತಾಯಿಯ ಆರೋಗ್ಯ ಸ್ಥಿರವಾಗಿದೆ. ಧೋನಿ ಕುಟುಂಬದ ಕುರಿತು ಎಲ್ಲ ಮಾಹಿತಿಗಳನ್ನು ನಾವು ನಿರಂತರವಾಗಿ ಪಡೆಯುತ್ತಿದ್ದೇವೆ ಎಂದು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಕೋಚ್ ಸ್ಟಿಫನ್ ಫ್ಲೆಮಿಂಗ್ ಹೇಳಿದರು.

ಬುಧವಾರ ರಾತ್ರಿ ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡವು ಜಯಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಧೋನಿ ಕುಟುಂಬದ ಸ್ಥಿತಿ ಗತಿಯ ಕುರಿತು ನಮಗೆ ಅರಿವು ಇದೆ. ಖಾಸಗಿ ಆಸ್ಪತ್ರೆಯಲ್ಲಿ ಅವರು ತಂದೆ ತಾಯಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಧೋನಿಯೊಂದಿಗೆ ನಮ್ಮ ತಂಡ ಮತ್ತು ಫ್ರ್ಯಾಂಚೈಸ್ ಇದೆ. ಅವರಿಗೆ ಅಗತ್ಯವಿರುವ ಎಲ್ಲ ಬೆಂಬಲ ಒದಗಿಸಲು ಸಿದ್ಧವಾಗಿದ್ದೇವೆ‘ ಎಂದರು.

ಧೋನಿ ಅವರ ತಾಯಿ ದೇವಿಕಾ ದೇವಿ ಮತ್ತು ತಂದೆ ಪಾನ್ ಸಿಂಗ್ ಅವರಿಗೆ ಕೋವಿಡ್ ಇರುವುದು ಬುಧವಾರ ಖಚಿತವಾಗಿತ್ತು. ರಾಂಚಿಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಇದೊಂದು ಸಂಕಷ್ಟದ ಸಂದರ್ಭವಾಗಿದೆ. ಪ್ರತಿಯೊಬ್ಬರ ಮುಂದೆಯೂ ಕಠಿಣ ಪರಿಸ್ಥಿತಿಯ ಸವಾಲು ಇದೆ. ಬಯೋಬಬಲ್‌ನಲ್ಲಿ ದೀರ್ಘ ಕಾಲದಿಂದ ಇದ್ದೇವೆ. ಇದು ನಮ್ಮೆಲ್ಲರನ್ನೂ ಪರಸ್ಪರ ಹತ್ತಿರ ತಂದಿದೆ. ಪ್ರತಿಯೊಬ್ಬರ ಕುಟುಂಬ, ಆಪ್ತರ ಕುರಿತು ಸಮಾಲೋಚನೆ ನಡೆಸುವುದರಿಂದ ಬಹಳಷ್ಟು ಅನುಕೂಲವಾಗುತ್ತಿದೆ‘ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು