ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಕೊಹ್ಲಿ ಬ್ಯಾಟಿಂಗ್ ಕೊಂಡಾಡಿದ ಎಬಿ ಡಿವಿಲಿಯರ್ಸ್

Last Updated 16 ಜನವರಿ 2023, 10:33 IST
ಅಕ್ಷರ ಗಾತ್ರ

ನವದೆಹಲಿ: ಶ್ರೀಲಂಕಾ ವಿರುದ್ಧ ತಿರುವನಂತಪುರದಲ್ಲಿ ಭಾನುವಾರ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ ಅವರನ್ನು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

'ಬೇರೆದ್ದೇ ಲೆವೆಲ್' ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಸಹ ಆಟಗಾರನ ಕುರಿತು ವಿಲಿಯರ್ಸ್ ಕೊಂಡಾಡಿದ್ದಾರೆ.

ಏಕದಿನದಲ್ಲಿ ಕೊಹ್ಲಿ ಅವರ 46ನೇ ಶತಕದ ಬೆಂಬಲದೊಂದಿಗೆ ಟೀಮ್ ಇಂಡಿಯಾ, ಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 317 ರನ್ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆಯ ಅಂತರದ ಗೆಲುವು ದಾಖಲಿಸಿದೆ.

110 ಎಸೆತಗಳನ್ನು ಎದುರಿಸಿದ್ದ ವಿರಾಟ್, 13 ಬೌಂಡರಿ ಹಾಗೂ ಎಂಟು ಸಿಕ್ಸರ್‌ಗಳಿಂದ 166 ರನ್ ಗಳಿಸಿ ಔಟಾಗದೆ ಉಳಿದರು.

ಏಕದಿನದಲ್ಲಿ ಅತಿ ದೊಡ್ಡ (ರನ್) ಅಂತರದ ಗೆಲುವು - ಪಟ್ಟಿ ಇಂತಿದೆ:
ಭಾರತ - 317 ರನ್ (ಶ್ರೀಲಂಕಾ ವಿರುದ್ಧ)
ನ್ಯೂಜಿಲೆಂಡ್ - 290 ರನ್ (ಐರ್ಲೆಂಡ್ ವಿರುದ್ಧ)
ಆಸ್ಟ್ರೇಲಿಯಾ - 275 ರನ್ (ಅಫ್ಗಾನಿಸ್ತಾನ ವಿರುದ್ಧ)
ದಕ್ಷಿಣ ಆಫ್ರಿಕಾ - 272 ರನ್ (ಜಿಂಬಾಬ್ವೆ ವಿರುದ್ಧ)
ದಕ್ಷಿಣ ಆಫ್ರಿಕಾ - 258 ರನ್ (ಶ್ರೀಲಂಕಾ ವಿರುದ್ಧ)
ಭಾರತ - 257 ರನ್ (ಬರ್ಮುಡಾ ವಿರುದ್ಧ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT