ಗುರುವಾರ , ಫೆಬ್ರವರಿ 25, 2021
31 °C

12 ದಿಗ್ಗಜರು | ದೊಡ್ಡಗಣೇಶ್ ಆಯ್ಕೆ ಮಾಡಿದ ರಣಜಿ ತಂಡಕ್ಕೆ ವಿನಯಕುಮಾರ್ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸತತ ಎರಡು ಬಾರಿ ರಣಜಿ ಟ್ರೋಫಿಯನ್ನು ಗೆದ್ದುಕೊಟ್ಟ ನಾಯಕ ಆರ್. ವಿನಯಕುಮಾರ್ ಅವರು ಹಿರಿಯ ಕ್ರಿಕೆಟಿಗ ದೊಡ್ಡ ಗಣೇಶ್ ಆಯ್ಕೆ ಮಾಡಿರುವ ಕರ್ನಾಟಕ ರಣಜಿ ತಂಡವನ್ನು ಮುನ್ನಡೆಸಲಿದ್ದಾರೆ. 

ಕರ್ನಾಟಕ ಕ್ರಿಕೆಟ್‌ನ 12 ಮಂದಿ ದಿಗ್ಗಜರನ್ನು ಅವರು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಸದ್ಯ ಪುದುಚೇರಿ ಮತ್ತು ಕೇರಳ ತಂಡಗಳಲ್ಲಿ ಆಡು ತ್ತಿರುವ ವಿನಯ್ ಮತ್ತು ರಾಬಿನ್ ಉತ್ತಪ್ಪ ಹೊರತುಪಡಿಸಿದರೆ ಉಳಿದವರೆಲ್ಲರೂ ನಿವೃತ್ತರಾಗಿದ್ದಾರೆ.

ಈ ತಂಡದ ಇನ್ನೊಂದು ವಿಶೇಷವೆಂದರೆ ಇದರಲ್ಲಿರುವ 11 ಆಟಗಾರರು ಭಾರತ ತಂಡದಲ್ಲಿ ಆಡಿದ್ದರು.

ಈಚೆಗೆ ಅಮೆರಿಕ ತಂಡಕ್ಕೆ ಕೋಚ್ ಆಗಿ ಆಯ್ಕೆಯಾಗಿರುವ ಜೆ. ಅರುಣಕುಮಾರ್ ಈ ಬಳಗದಲ್ಲಿದ್ದಾರೆ. ಅವರು ಕರ್ನಾಟಕವು ಆರು ವರ್ಷಗಳ ಹಿಂದೆ ಸತತ ಎರಡು ಋತುಗಳಲ್ಲಿ ಚಾಂಪಿಯನ್ ಆದಾಗ ತಂಡದ ಕೋಚ್ ಆಗಿದ್ದರು.  

ತಂಡ: ಆರ್. ವಿನಯಕುಮಾರ್ (ನಾಯಕ), ಜೆ.ಅರುಣಕುಮಾರ್, ರಾಬಿನ್ ಉತ್ತಪ್ಪ, ರಾಹುಲ್ ದ್ರಾವಿಡ್, ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್, ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ, ಜಾವಗಲ್ ಶ್ರೀನಾಥ್, ಎರಪಳ್ಳಿ ಪ್ರಸನ್ನ, ಬಿ. ಎಸ್. ಚಂದ್ರಶೇಖರ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು