ಕ್ವಾಲಾಲಂಪುರ: ಹಾಲಿ ಚಾಂಪಿಯನ್ ಭಾರತ 19 ವರ್ಷದೊಳಗಿನ ಮಹಿಳಾ ತಂಡವು ಸತತ ಎರಡನೇ ಬಾರಿ ವಿಶ್ವಕಪ್ ಜಯದ ಮೇಲೆ ಕಣ್ಣಿಟ್ಟಿದೆ.

ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಆಟಗಾರ್ತಿ ನಿಕಿ ಪ್ರಸಾದ್ ನಾಯಕತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ.

ಈ ಬಾರಿಯ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೇ ಫೈನಲ್ ತಲುಪಿರುವ ಭಾರತ ತಂಡವು ಫೈನಲ್ನಲ್ಲಿ ಜಯಿಸುವ ಫೆವರಿಟ್ ಆಗಿದೆ. ವೆಸ್ಟ್ ಇಂಡೀಸ್ (9 ವಿಕೆಟ್), ಮಲೇಷ್ಯಾ (10 ವಿಕೆಟ್), ಶ್ರೀಲಂಕಾ (60 ರನ್), ಬಾಂಗ್ಲಾದೇಶ (8 ವಿಕೆಟ್), ಸ್ಕಾಟ್ಲೆಂಡ್ (150 ರನ್) ಮತ್ತು ಇಂಗ್ಲೆಂಡ್ (ಸೆಮಿಫೈನಲ್ನಲ್ಲಿ 9 ವಿಕೆಟ್) ತಂಡಗಳ ಎದುರು ನಿಕಿ ಪ್ರಸಾದ್ ಬಳಗವು ಪಾರಮ್ಯ ಸಾಧಿಸಿತ್ತು.

ತಂಡದ ಆರಂಭಿಕ ಬ್ಯಾಟರ್ ಜಿ. ತ್ರಿಷಾ 6 ಇನಿಂಗ್ಸ್ಗಳಿಂದ 265 ರನ್ ಸೇರಿಸಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ್ತಿಯಾಗಿದ್ದಾರೆ. ಎಡಗೈ ಬ್ಯಾಟರ್ ಜಿ. ಕಮಲಿನಿ (135 ರನ್) ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ಕಳೆದ ಪಂದ್ಯಗಳಲ್ಲಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರುವ ಅವಕಾಶ ಸಿಕ್ಕಿಲ್ಲ. ಒಂದೊಮ್ಮೆ ಫೈನಲ್ನಲ್ಲಿ ಆರಂಭಿಕ ಜೋಡಿ ವಿಫಲರಾದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಎಚ್ಚರಿಕೆಯಿಂದ ಹೊಣೆ ನಿಭಾಯಿಸಬೇಕಿದೆ.

ಬೌಲಿಂಗ್ನಲ್ಲಿ ಎಡಗೈ ಸ್ಪಿನ್ ಜೋಡಿ ವೈಷ್ಣವಿ ಶರ್ಮಾ (15 ವಿಕೆಟ್) ಮತ್ತು ಆಯುಷಿ ಶುಕ್ಲಾ (12 ವಿಕೆಟ್) ಅವರು ಉತ್ತಮ ಲಯದಲ್ಲಿದ್ದಾರೆ. ಅಂತಿಮ ಪಂದ್ಯದಲ್ಲಿ ಇವರಿಬ್ಬರ ಪಾತ್ರ ಮಹತ್ವದಾಗಲಿದೆ.

ದಕ್ಷಿಣ ಆಫ್ರಿಕಾ ತಂಡವು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ಗಳಿಂದ ಗೆದ್ದಿತ್ತು. ಇದೀಗ ಹಾಲಿ ಚಾಂಪಿಯನ್ ಬಳಗಕ್ಕೆ ಆಘಾತ ನೀಡುವ ಛಲದಲ್ಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 12 (ಭಾರತೀಯ ಕಾಲಮಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.