ಸೋಮವಾರ, ಆಗಸ್ಟ್ 2, 2021
26 °C

ಮ್ಯಾಂಚೆಸ್ಟರ್ ಟೆಸ್ಟ್: ಮಳೆಯಲ್ಲಿ ಮುಳುಗಿದ ಮೂರನೇ ದಿನದಾಟ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಚೆಸ್ಟರ್: ಕೊರೊನಾ ಕಾಲದ ಮೊದಲ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಮಳೆರಾಯ ತನ್ನ ಆಟ ತೋರಿಸಿದ.

ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಣ ನಡೆಯುತ್ತಿರುವ ಎರಡನೇ ಪಂದ್ಯದ ಮೂರನೇ ದಿನವಾದ ಶನಿವಾರ ಮಳೆಯಿಂದಾಗಿ  ಆಟ ನಡೆಯಲಿಲ್ಲ.

ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಬೆನ್ ಸ್ಟೋಕ್ಸ್‌ ಮತ್ತು ಡಾಮ್ ಡೆ್ನ್ಲಿ ಅವರ ಆಕರ್ಷಕ ಶತಕಗಳ ಬಲದಿಂದ ಇಂಗ್ಲೆಂಡ್ ತಂಡವು 162 ಓವರ್‌ಗಳಲ್ಲಿ 9ಕ್ಕೆ 469 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಶುಕ್ರವಾರ ಸಂಜೆ ಬ್ಯಾಟಿಂಗ್ ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡವು 14 ಓವರ್‌ಗಳಲ್ಲಿ  ಒಂದು ವಿಕೆಟ್‌ಗೆ 32 ರನ್‌ ಗಳಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಕ್ರೇಗ್ ಬ್ರಾಥ್‌ವೇಟ್ (ಬ್ಯಾಟಿಂಗ್ 6) ಮತ್ತು ’ರಾತ್ರಿ ಕಾವಲುಗಾರ‘ ಅಲ್ಜರಿ ಜೋಸೆಫ್ (ಬ್ಯಾಟಿಂಗ್ 14) ಕ್ರೀಸ್‌ನಲ್ಲಿದ್ದರು. ಆದರೆ ಶನಿವಾರ ಆಟ ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಸೌತಾಂಪ್ಟನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನ ಪ್ರಥಮ ದಿನವೇ ಮಳೆ ಸುರಿದಿತ್ತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು