ಲಂಡನ್: ಆಸ್ಟ್ರೇಲಿಯಾ ವಿರುದ್ಧ ಆ್ಯಷಸ್ ಸರಣಿಯಿಂದ ಹೊರಗುಳಿದ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಅವರು ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು.

15 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಅವರು 62 ಟೆಸ್ಟ್ ಪಂದ್ಯಗಳನ್ನು ಆಡಿ, 2,034 ರನ್ ಗಳಿಸಿದ್ದಾರೆ ಮತ್ತು ವೇಗದ ಬೌಲಿಂಗ್ ಮೂಲಕ 192 ವಿಕೆಟ್ಗಳನ್ನು ಪಡೆದಿದ್ದಾರೆ.

ಅವರು ಜುಲೈನಲ್ಲಿ ಭಾರತದ ವಿರುದ್ಧ ಕೊನೆಯ ಬಾರಿ ಟೆಸ್ಟ್ ಆಡಿದ್ದರು. ಓವಲ್ ಕ್ರೀಡಾಂಗಣದಲ್ಲಿ ರೋಚಕ ಹಂತ ತಲುಪಿದ್ದ ಐದನೇ ಟೆಸ್ಟ್ನಲ್ಲಿ ಅವರು ತಮ್ಮ ಮುರಿದ ಕೈಗೆ ಬ್ಯಾಂಡೇಜ್ ಹಾಕಿಕೊಂಡೇ ಕ್ರೀಸ್ಗೆ ಬಂದಿದ್ದರು.

36 ವರ್ಷದ ವೋಕ್ಸ್ ಅವರು 122 ಏಕದಿನ ಮತ್ತು 33 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 1,524 ಮತ್ತು 147 ರನ್ ಗಳಿಸಿದ್ದಾರೆ. ಸೀಮಿತ ಓವರ್ಗಳ ಮಾದರಿಯಲ್ಲಿ ಒಟ್ಟು 204 ವಿಕೆಟ್ಗಳನ್ನು ಗಳಿಸಿದ್ದಾರೆ. 2023ರ ನವೆಂಬರ್ನಲ್ಲಿ ಕೊನೆಯ ಬಾರಿ ಏಕದಿನ ಮತ್ತು ಅದೇ ವರ್ಷ ಡಿಸೆಂಬರ್ನಲ್ಲಿ ಕೊನೆಯ ಬಾರಿ ಟಿ20 ಪಂದ್ಯವನ್ನು ಅವರು ಆಡಿದ್ದರು.

‘ಆ ಕ್ಷಣ ಬಂದಿದೆ. ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ಇದು ಸರಿಯಾದ ಸಮಯ. ಇಂಗ್ಲೆಂಡ್ ಪರ ಆಡುವುದು ಬಾಲ್ಯದ ಕನಸಾಗಿತ್ತು. ಅದು ನನಸಾಗಿಸಲು ಸಾಧ್ಯವಾದದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ’ ಎಂದು ವೋಕ್ಸ್ ಹೇಳಿದರು.

2019ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಮತ್ತು 2022 ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿ ವೋಕ್ಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.