ಶುಕ್ರವಾರ, ಫೆಬ್ರವರಿ 3, 2023
18 °C

ರಾವಲ್ಪಿಂಡಿ:ಮೊದಲ ಟೆಸ್ಟ್‌ ಕ್ರಿಕೆಟ್ ಪಂದ್ಯ– ಇಂಗ್ಲೆಂಡ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾವಲ್ಪಿಂಡಿ: ಹಲವು ದಾಖಲೆಗಳಿಗೆ ಕಾರಣವಾದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಪಾಕಿಸ್ತಾನದ ವಿರುದ್ಧ 74 ರನ್‌ಗಳ ಗೆಲುವು ಪಡೆಯಿತು.

ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 343 ರನ್‌ಗಳ ಗುರಿ ಪಡೆದಿದ್ದ ಪಾಕಿಸ್ತಾನ, ಅಂತಿಮ ದಿನವಾದ ಸೋಮವಾರ 96.3 ಓವರ್‌ಗಳಲ್ಲಿ 268 ರನ್‌ಗಳಿಗೆ ಆಲೌಟಾಯಿತು.

ತಲಾ ನಾಲ್ಕು ವಿಕೆಟ್‌ ಪಡೆದ ಒಲೀ ರಾಬಿನ್ಸನ್‌ ಮತ್ತು ಜೇಮ್ಸ್‌ ಆ್ಯಂಡರ್ಸನ್‌ ಅವರು ಇಂಗ್ಲೆಂಡ್‌ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

2 ವಿಕೆಟ್‌ಗಳಿಗೆ 80ರನ್‌ಗಳಿಂದ ಆಟ ಮುಂದುವರಿಸಿದ ಪಾಕಿಸ್ತಾನ ಮೊದಲ ಎರಡು ಅವಧಿಗಳಲ್ಲಿ ದಿಟ್ಟ ಹೋರಾಟ ನಡೆಸಿ ಅಚ್ಚರಿಯ ಗೆಲುವಿನ ನಿರೀಕ್ಷೆ ಮೂಡಿಸಿತ್ತು.

ಚಹಾ ವಿರಾಮದ ವೇಳೆಗೆ ಆತಿಥೇಯ ತಂಡ 5 ವಿಕೆಟ್‌ಗಳಿಗೆ 257 ರನ್‌ ಕಲೆಹಾಕಿತ್ತು. ಅಂತಿಮ ಅವಧಿಯಲ್ಲಿ ಐದು ವಿಕೆಟ್‌ಗಳಿಂದ 86 ರನ್‌ ಗಳಿಸಬೇಕಿತ್ತು. ಆ್ಯಂಡರ್ಸನ್‌ ಮತ್ತು ರಾಬಿನ್ಸನ್‌ ಅವರು ಮೊನಚಾದ ದಾಳಿ ನಡೆಸಿ ಪಾಕ್‌ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದರು.

ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ 1–0 ರಲ್ಲಿ ಮುನ್ನಡೆ ಗಳಿಸಿದೆ. ಎರಡನೇ ಟೆಸ್ಟ್‌ ಮುಲ್ತಾನ್‌ನಲ್ಲಿ ಡಿ.9 ರಿಂದ 13ರ ವರೆಗೆ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಇಂಗ್ಲೆಂಡ್ 657, ಪಾಕಿಸ್ತಾನ: 579. ಎರಡನೇ ಇನಿಂಗ್ಸ್: ಇಂಗ್ಲೆಂಡ್: 35.5 ಓವರ್‌ಗಳಲ್ಲಿ 7ಕ್ಕೆ264 ಡಿಕ್ಲೇರ್ಡ್, ಪಾಕಿಸ್ತಾನ 96.3 ಓವರ್‌ಗಳಲ್ಲಿ 268 (ಇಮಾಮ್ ಉಲ್ ಹಕ್ 48, ಸೌದ್ ಶಕೀಲ್ 76,ಮೊಹಮ್ಮದ್‌ ರಿಜ್ವಾನ್‌ 46, ಆಘಾ ಸಲ್ಮಾನ್ 30, ಒಲೀ ರಾಬಿನ್ಸನ್ 50ಕ್ಕೆ 4, ಜೇಮ್ಸ್‌ ಆ್ಯಂಡರ್ಸನ್‌ 36ಕ್ಕೆ 4) ಫಲಿತಾಂಶ: ಇಂಗ್ಲೆಂಡ್‌ಗೆ 74 ರನ್‌ಗಳ ಗೆಲುವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು