ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೋಕ್ಸ್‌ಗೆ ಇಂಗ್ಲೆಂಡ್‌ ಸಾರಥ್ಯ

Last Updated 4 ಜುಲೈ 2020, 11:25 IST
ಅಕ್ಷರ ಗಾತ್ರ

ಲಂಡನ್‌: ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರು ಇದೇ ತಿಂಗಳ 8 ರಿಂದ 12ರವರೆಗೆ ಸೌತಾಂಪ್ಟನ್‌ನ ಏಜಿಸ್‌ ಬೌಲ್‌ ಮೈದಾನದಲ್ಲಿ ನಡೆಯುವ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಶನಿವಾರ 13 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆಫ್‌ ಸ್ಪಿನ್ನರ್‌ಡಾಮಿನಿಕ್‌ ಬೆಸ್ ಅವರಿಗೂ ಅವಕಾಶ ನೀಡಲಾಗಿದೆ. ಬೆಸ್‌ ಅವರು ಜನವರಿಯಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು.

ನಾಯಕ ಜೋ ರೂಟ್‌ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೆರಿಗೆ ಸಮಯದಲ್ಲಿ ಪತ್ನಿಯ ಜೊತೆ ಇರಲು ಬಯಸಿರುವ ಅವರು ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಹೀಗಾಗಿ ನಾಯಕತ್ವದ ಹೊಣೆ ಸ್ಟೋಕ್ಸ್‌ ಹೆಗಲಿಗೇರಿದೆ.

ತಂಡ ಇಂತಿದೆ: ಬೆನ್‌ ಸ್ಟೋಕ್ಸ್‌ (ನಾಯಕ), ಜೇಮ್ಸ್‌ ಆ್ಯಂಡರ್‌ಸನ್‌‌, ಜೋಫ್ರಾ ಆರ್ಚರ್‌, ಡಾಮಿನಿಕ್‌ ಬೆಸ್‌, ಸ್ಟುವರ್ಟ್‌ ಬ್ರಾಡ್‌, ರೋರಿ ಬರ್ನ್ಸ್‌, ಜೋಸ್‌ ಬಟ್ಲರ್‌, ಜ್ಯಾಕ್‌ ಕ್ರಾವ್ಲಿ, ಜೋ ಡೆನ್ಲಿ, ಒಲಿ ಪೋಪ್‌, ಡಾಮ್‌ ಸಿಬ್ಲಿ, ಕ್ರಿಸ್‌ ವೋಕ್ಸ್‌ ಮತ್ತು ಮಾರ್ಕ್‌ ವುಡ್‌.

ಕಾಯ್ದಿರಿಸಿದ ಆಟಗಾರರು: ಜೇಮ್ಸ್‌ ಬ್ರೇಸಿ, ಸ್ಯಾಮ್‌ ಕರನ್‌, ಬೆನ್‌ ಫೋಕ್ಸ್‌, ಡ್ಯಾನ್‌ ಲಾರೆನ್ಸ್‌, ಜ್ಯಾಕ್‌ ಲೀಚ್‌, ಶಕೀಬ್‌ ಮಹಮ್ಮದ್‌, ಕ್ರೇಗ್‌ ಓವರ್‌ಟನ್‌, ಒಲಿ ರಾಬಿನ್‌ಸನ್‌ ಹಾಗೂ ಒಲಿ ಸ್ಟೋನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT