ಭಾನುವಾರ, ಏಪ್ರಿಲ್ 18, 2021
25 °C
ಅಕ್ಷರ್‌ಗೆ 4 ವಿಕೆಟ್‌

Ind vs Eng 3ನೇ ಟೆಸ್ಟ್: ರೋಹಿತ್‌ ಅರ್ಧ ಶತಕ, ಭಾರತದ 3 ವಿಕೆಟ್‌ ಪತನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಭಾರತ ತಂಡದ ವಿರುದ್ಧ ಇಲ್ಲಿ ಬುಧವಾರ ಇಲ್ಲಿ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಪ್ರವಾಸಿ ತಂಡವು 48.4 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 112 ರನ್‌ ಗಳಿಸಿತು. ನಂತರ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ರೋಹಿತ್‌ ಶರ್ಮಾ ಅರ್ಧ ಶತಕದಿಂದ ನೆರವಾದರು. ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್‌ ನಷ್ಟಕ್ಕೆ 99 ರನ್‌ ಗಳಿಸಿದೆ. 

ರೋಹಿತ್‌ ಶರ್ಮಾ (57) ಮತ್ತು ಅಜಿಂಕ್ಯ ರಹಾನೆ (1) ಕಣದಲ್ಲಿದ್ದಾರೆ. ವಿರಾಟ್ ಕೊಹ್ಲಿ 27 ರನ್‌ ಗಳಿಸಿದರೆ, ಆರಂಭಿಕ ಬ್ಯಾಟ್ಸ್‌ಮನ್‌ ಶುಭಮನ್ ಗಿಲ್ ಕೇವಲ 11 ರನ್‌ ಪೇರಿಸಿದರು. ಇನ್ನೂ ಚೇತೇಶ್ವರ್ ಪೂಜಾರ ರನ್‌ ಖಾತೆ ತೆರೆಯುವ ಮುನ್ನವೇ ಎಲ್‌ಬಿಡಬ್ಲ್ಯುಗೆ ಸಿಲುಕಿದರು.

100ನೇ ಟೆಸ್ಟ್ ಪಂದ್ಯವಾಡುತ್ತಿರುವ ಹಿರಿಯ ವೇಗಿ ಇಶಾಂತ್ ಶರ್ಮಾ ಅವರು ಆರಂಭಿಕ ಡಾಮ್ನಿಕ್ ಸಿಬ್ಲಿ (0) ವಿಕೆಟ್‌ ಕಿತ್ತು ಸಂಭ್ರಮಿಸಿದರು. ಎಡಗೈ ಸ್ಪಿನ್ನರ್‌ ಅಕ್ಷರ್ ಪಟೇಲ್‌ ಎಸೆತದಲ್ಲಿ  ಜಾನಿ ಬೆಸ್ಟೊ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ವೇಳೆ ಇಂಗ್ಲೆಂಡ್ ಮೊತ್ತ 27 ರನ್‌ ಆಗಿತ್ತು. ನಾಯಕ ಜೋ ರೂಟ್‌ (17) ಅವರನ್ನು ರವಿಚಂದ್ರನ್ ಅಶ್ವಿನ್ ಪೆವಿಲಿಯನ್‌ಗೆ ಕಳುಹಿಸಿದರು.

ಅರ್ಧಶತಕ ಪೂರೈಸಿ ಮುನ್ನುಗ್ಗುತ್ತಿದ್ದ ಜ್ಯಾಕ್ ಕ್ರಾವ್ಲಿ (53) ಅವರನ್ನು ಅಕ್ಷರ್ ಸ್ಪಿನ್ ಬಲೆಗೆ ಬೀಳಿಸಿದರು.

ಅಕ್ಸರ್‌ ಪಟೇಲ್‌ 6 ವಿಕೆಟ್‌, ರವಿಚಂದ್ರನ್‌ ಅಶ್ವಿನ್‌ 3 ವಿಕೆಟ್ ಹಾಗೂ ಇಶಾಂತ್‌ ಶರ್ಮಾ 1 ವಿಕೆಟ್‌ ಪಡೆದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು