ಲಂಡನ್: ಇದೇ ತಿಂಗಳ 22 ರಿಂದ ಟ್ರೆಂಟ್ಬ್ರಿಜ್ನಲ್ಲಿ ಜಿಂಬಾಬ್ವೆ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಇನ್ನೂ ಟೆಸ್ಟ್ ಆಡಿಲ್ಲದ ಸ್ಯಾಮ್ ಕುಕ್ ಮತ್ತು ಜೋರ್ಡನ್ ಕಾಕ್ಸ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅನುಭವಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರು ತಂಡಕ್ಕೆ ನಾಯಕನಾಗಿ ಮರಳಿದ್ದಾರೆ.

ಜಿಂಬಾಬ್ವೆ ತಂಡ 2003ರ ನಂತರ ಇದೇ ಮೊದಲ ಬಾರಿ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದೆ. ಇದು ಇಂಗ್ಲೆಂಡ್ ತಂಡದ ಹಾಲಿ ಋತುವಿನ ಮೊದಲ ಟೆಸ್ಟ್ ಕೂಡ. ಇದರ ಬಳಿಕ ಇಂಗ್ಲೆಂಡ್ ತಂಡವು ಜೂನ್ 20ರಿಂದ ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.

27 ವರ್ಷ ವಯಸ್ಸಿನ ಮಧ್ಯಮ ವೇಗಿ ಕುಕ್, ಇತ್ತೀಚಿನ ವರ್ಷಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಮೊದಲ ದರ್ಜೆ ಕ್ರಿಕೆಟ್ನಲ್ಲಿ 19.77ರ ಸರಾಸರಿಯಲ್ಲಿ ಅವರು 318 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ಲಯನ್ಸ್ ಪರ ಕಳೆದ ಚಳಿಗಾಲದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರು 13 ವಿಕೆಟ್ಗಳನ್ನು ಪಡೆದಿದ್ದರು.

ವಿಕೆಟ್ ಕೀಪರ್ –ಬ್ಯಾಟರ್ ಕಾಕ್ಸ್ ಅವರು ನ್ಯೂಜಿಲೆಂಡ್ ವಿರುದ್ಧ ಕಳೆದ ವರ್ಷ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದರೂ, ಹೆಬ್ಬೆರಳಿನ ಗಾಯದಿಂದಾಗಿ ಆಡಲು ಆಗಿರಲಿಲ್ಲ.

ನಾಟಿಂಗ್ಹ್ಯಾಮ್ಶೈರ್ ತಂಡದ ವೇಗಿ ಜೋಶ್ ಟಂಗ್ ಎರಡು ವರ್ಷಗಳ ನಂತರ ತಂಡಕ್ಕೆ ಮರಳಿದ್ದಾರೆ. 2023ರ ಆ್ಯಷಸ್ ಸರಣಿಯಲ್ಲಿ ಕೊನೆಯ ಬಾರಿ ತಂಡಕ್ಕೆ ಆಡಿದ್ದರು. ನಂತರ ಕೆಲವು ಬಾರಿ ಗಾಯಾಳಾಗಿ ತಂಡದಿಂದ ಹೊರಗಿದ್ದರು. ಆದರೆ ಕೌಂಟಿ ಚಾಂಪಿಯನ್ಷಿಪ್ಗೆ ಮರಳಿದ ಅವರು 24ರ ಸರಾಸರಿಯಲ್ಲಿ 15 ವಿಕೆಟ್ಗಳನ್ನು ಕಬಳಿಸಿದ್ದಾರೆ.

ತಂಡ ಹೀಗಿದೆ: ಬೆನ್ ಸ್ಟೋಕ್ಸ್ (ನಾಯಕ), ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಸ್ಯಾಮ್ ಕುಕ್, ಜೋರ್ಡನ್ ಕಾಕ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಸ್ ಟಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.