ಮಂಗಳವಾರ, ಮಾರ್ಚ್ 2, 2021
28 °C

ಈಗಿನ ಇಂಗ್ಲೆಂಡ್‌ ತಂಡ ಭಿನ್ನ ರೀತಿಯದ್ದು: ಲಿಯಾಮ್‌ ಪ್ಲಂಕೆಟ್‌ ಎಚ್ಚರಿಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬರ್ಮಿಂಗ್‌ಹ್ಯಾಮ್‌: ‘ಈಗಿನ ಇಂಗ್ಲೆಂಡ್‌ ತಂಡ, ಈ ಹಿಂದಿನ ತಂಡಗಳಿಗಿಂತ ಭಿನ್ನ ರೀತಿಯ ತಂಡ’ ಎಂದು ತಂಡದ ವೇಗದ ಬೌಲರ್‌ ಲಿಯಾಮ್‌ ಪ್ಲಂಕೆಟ್‌ ಎಚ್ಚರಿಕೆ ನೀಡಿದ್ದಾರೆ. ಇಂಗ್ಲೆಂಡ್‌, ಗುರುವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಆ್ಯಷಸ್‌ ಎದುರಾಳಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ, ಆರನೇ ಬಾರಿ ವಿಶ್ವಕಪ್‌ ಎತ್ತಿಕೊಳ್ಳುವ ಇರಾದೆಯಲ್ಲಿದ್ದರೆ, ಇಂಗ್ಲೆಂಡ್‌ ಮೊದಲ ಬಾರಿ ಚಾಂಪಿಯನ್‌ ಆಗುವ ಪ್ರಯತ್ನದಲ್ಲಿದೆ.

‘ನಮ್ಮ ಹಿಂದಿನ ತಂಡಗಳಿಗಿಂತ ಈಗಿನ ತಂಡ ಭಿನ್ನ ರೀತಿಯದು. ಕಳೆದ ನಾಲ್ಕು ವರ್ಷಗಳಿಂದ ಉತ್ತಮವಾಗಿ ಆಡುತ್ತಿದ್ದೇವೆ. ವಿಶ್ವದಲ್ಲಿ ಅಗ್ರ ಕ್ರಮಾಂಕಕ್ಕೆ ಏರಿದ್ದೇವೆ. ಇದು ನಮ್ಮ ದಿನ ಎಂಬ ಭಾವನೆ ಬಂದಲ್ಲಿ ನಾವು ಯಾವುದೇ ತಂಡ ಸೋಲಿಸಲು ಸಮರ್ಥರು. ಅನುಭವದ ದೃಷ್ಟಿಯಿಂದ ಆಸ್ಟ್ರೇಲಿಯಾಕ್ಕೆ ಸ್ವಲ್ಪ ಅನುಕೂಲವಿದೆ ನಿಜ’ ಎನ್ನುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು