ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್: ಇಂಗ್ಲೆಂಡ್‌ ಜಯಭೇರಿ

Published 31 ಆಗಸ್ಟ್ 2023, 16:30 IST
Last Updated 31 ಆಗಸ್ಟ್ 2023, 16:30 IST
ಅಕ್ಷರ ಗಾತ್ರ

ಚೆಸ್ಟರ್‌ ಲಿ ಸ್ಟ್ರೀಟ್: ಬ್ರೈಡನ್ ಕಾರ್ಸ್ ಅಮೋಘ ಬೌಲಿಂಗ್ ಮತ್ತು ಡೇವಿಡ್ ಮಲಾನ್ ಅರ್ಧಶತಕದ ಬಲದಿಂದ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಜಯಿಸಿತು.

ರಿವರ್‌ಸೈಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡವು 7 ವಿಕೆಟ್‌ಗಳಿಂದ ಜಯಿಸಿತು. ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗದ ಬೌಲರ್ ಬ್ರೈಡನ್ ಹಾಗೂ ಲೂಕ್ ವುಡ್ ಅವರು ತಲಾ ಮೂರು ವಿಕೆಟ್ ಗಳಿಸದಿರು. ಇದರಿಂದಾಗಿ ಕಿವೀಸ್ ಬಳಗವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 139 ರನ್ ಗಳಿಸಿತು.

ಅದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು ಇನಿಂಗ್ಸ್‌ನಲ್ಲಿ ಇನ್ನೂ ಆರು ಓವರ್‌ಗಳು ಬಾಕಿ ಇರುವಾಗಲೇ 3 ವಿಕೆಟ್‌ಗಳಿಗೆ 143 ರನ್‌ ಗಳಿಸಿತು. ಡೇವಿಡ್ ಮಲಾನ್ (54; 42ಎ) ಹಾಗೂ ಹ್ಯಾರಿ ಬ್ರೂಕ್ (ಔಟಾಗದೆ 43; 27ಎ) ತಂಡವನ್ನು ಜಯದತ್ತ ಮುನ್ನಡೆಸಿದರು. ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1–0 ಮುನ್ನಡೆ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 139 (ಫಿನ್ ಅಲೆನ್ 21, ಗ್ಲೆನ್ ಫಿಲಿಪ್ಸ್ 41, ಈಶ್ ಸೋಧಿ 16, ಲೂಕ್ ವುಡ್ 37ಕ್ಕೆ3, ಬ್ರೈಡನ್ ಕಾರ್ಸ್ 23ಕ್ಕೆ3) ಇಂಗ್ಲೆಂಡ್: 14 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ143 (ವಿಲ್ ಜ್ಯಾಕ್ಸ್ 22, ಡೇವಿಡ್ ಮಲಾನ್ 54, ಹ್ಯಾರಿ ಬ್ರೂಕ್ ಔಟಾಗದೆ 43, ಟಿಮ್ ಸೌಥಿ 25ಕ್ಕೆ1, ಲಾಕಿ ಫರ್ಗ್ಯುಸನ್ 34ಕ್ಕೆ1,  ಈಶ್ ಸೋಧಿ 23ಕ್ಕೆ1) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 7 ವಿಕೆಟ್‌ ಜಯ. ಪಂದ್ಯಶ್ರೇಷ್ಠ: ಬ್ರೈಡನ್ ಕಾರ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT