ಮುಂಬೈ: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡಕ್ಕೆ ವರುಣ್ ಚಕ್ರವರ್ತಿಯವರನ್ನು ಸೇರ್ಪಡೆ ಮಾಡಿರುವುದು ಉತ್ತಮ ನಿರ್ಧಾರ ಎಂದು ಹೇಳಿರುವ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್, ಏಕದಿನ ಮಾದರಿಯಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು ವರುಣ್ ಚಕ್ರವರ್ತಿ ಅವರನ್ನು ಯಶಸ್ವಿಯಾಗಿ ಎದುರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ–20 ಸರಣಿಯಲ್ಲಿ ವರುಣ್ 14 ವಿಕೆಟ್ ಪಡೆದಿದ್ದರು. ಈ ಸರಣಿಯನ್ನು ಭಾರತ 4–1ರಿಂದ ಗೆದ್ದುಕೊಂಡಿತ್ತು.

ವರುಣ್ ಅವರ ಪ್ರದರ್ಶನವನ್ನು ಪರಿಗಣಿಸಿ, ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಇಂಗ್ಲೆಂಡ್ ವಿರುದ್ಧದ ಏಕದಿನ ತಂಡಕ್ಕೆ ಇಂದು ಅವರನ್ನು ಸೇರ್ಪಡೆ ಮಾಡಲಾಗಿದೆ.

‘ಏಕದಿನ ಮಾದರಿಯಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು ವರುಣ್ ಚಕ್ರವರ್ತಿ ವಿರುದ್ಧ ಉತ್ತಮ ಪ್ರದರ್ಶನ ನೀಡಲಿದ್ದಾರೆ. ದೀರ್ಘ ಮಾದರಿಯ ಏಕದಿನ ಕ್ರಿಕೆಟ್ನಲ್ಲಿ ಸ್ಪಿನ್ನರ್ ಅನ್ನು ಅರ್ಥ ಮಾಡಿಕೊಳ್ಳಲು ಬ್ಯಾಟರ್ಗಳಿಗೆ ಅಧಿಕ ಸಮಯ ಸಿಗುತ್ತದೆ. ಇದು ಚುಟುಕು ಮಾದರಿಯಂತಲ್ಲ. ಆದರೆ, ಭಾರತದ ಕಡೆಯಿಂದ ಇದೊಂದು ಒಳ್ಖೆಯ ನಿರ್ಧಾರ ಎಂದೂ ನನಗನಿಸುತ್ತದೆ’ ಎಂದು ಪೀಟರ್ಸನ್ ಹೇಳಿದ್ದಾರೆ.
.ಭಾರತ ತಂಡದಲ್ಲಿ ವರುಣ್ ಚಕ್ರವರ್ತಿ: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ?.
ಟಿ–20ಸರಣಿ ಸೋಲನ್ನು ಒಂದು ದುರಂತ ಎಂದು ಬಣ್ಣಿಸಿದ ಪೀಟರ್ಸನ್, ಪುಣೆಯಲ್ಲಿ ಕನ್ಕಶನ್ ಸಬ್ಸ್ಟಿಟ್ಯೂಟ್ ಅನ್ವಯ ಶಿವಂ ದುಬೆ ಜಾಗಕ್ಕೆ ಹರ್ಷಿತ್ ರಾಣಾ ಅವರಿಗೆ ಅವಕಾಶ ನೀಡದೇ ಹೊಗಿದ್ದರೆ ಸರಣಿ ಸಮವಾಗುತ್ತಿತ್ತು ಎಂದಿದ್ದಾರೆ.

ಇಂಗ್ಲೆಂಡ್ನ ದೃಷ್ಟಿಕೋನದಿಂದ ಇದು ನಿರಾಶಾದಾಯಕ ಸರಣಿಯಾಗಿದೆ. ನಾಲ್ಕನೇ ಪಂದ್ಯದಲ್ಲಿ, ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮವನ್ನು ಸರಿಯಾಗಿ ಬಳಸಿದ್ದರೆ, ಬಹುಶಃ ಆ ಪಂದ್ಯವನ್ನು ಇಂಗ್ಲೆಂಡ್ ಗೆದ್ದಿರುತ್ತಿತ್ತು. ಸರಣಿಯಲ್ಲಿ 2–2ರ ಸಮಬಲ ಸಾಧಿಸಿ ವಾಂಖೆಡೆಗೆ ಬರುತ್ತಿತ್ತು ಎಂದಿದ್ದಾರೆ.

ಅತ್ಯುತ್ತಮ ಟಿ20 ಇನ್ನಿಂಗ್ಸ್ ಆಡಿದ ಅಭಿಷೇಕ್ ಶರ್ಮಾ, ಭಾರತದ ಶ್ರೇಷ್ಠ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಮರೆಸಿದ್ದಾರೆ ಎಂದು ಪೀಟರ್ಸನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.