ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಜರ್ ಬಿನ್ನಿ ಹಿತಾಸಕ್ತಿ ಸಂಘರ್ಷ ಅರ್ಜಿ ವಜಾ

Last Updated 13 ಜನವರಿ 2023, 13:45 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ರೋಜರ್ ಬಿನ್ನಿ ಅವರ ವಿರುದ್ಧ ದಾಖಲಾಗಿದ್ದ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ದೂರನ್ನು ನೀತಿ ಅಧಿಕಾರಿ ವಜಾಗೊಳಿಸಿದ್ದಾರೆ.

ರೋಜರ್ ಅವರ ಸೊಸೆ ಮಯಾಂತಿ ಲ್ಯಾಂಗರ್ ಬಿನ್ನಿ ಅವರು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಕ್ರಿಕೆಟ್‌ ನಿರೂಪಕಿಯಾಗಿದ್ದಾರೆ. ಈ ವಾಹಿನಿಯು ಬಿಸಿಸಿಐನೊಂದಿಗೆ ಪ್ರಚಾರ ಗುತ್ತಿಗೆ ಹೊಂದಿದೆ. ಆದ್ದರಿಂದ ಆದ್ದರಿಂದ ರೋಜರ್ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಈಚೆಗೆ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಅಪೆಕ್ಸ್ ಕೌನ್ಸಿಲ್‌ನ ಮಾಜಿ ಸದಸ್ಯ ಸಂಜೀವ್ ಗುಪ್ತಾ ದೂರು ನೀಡಿದ್ದರು.

ಈ ದೂರನ್ನು ಪರಿಶೀಲಿಸಿದ ನೀತಿ ಅಧಿಕಾರಿ, ವಿಶ್ರಾಂತ ನ್ಯಾಯಮೂರ್ತಿ ವಿನೀತ್ ಸರನ್ ಅವರು 11 ಪುಟಗಳಲ್ಲಿ 20 ಅಂಶಗಳನ್ನು ಉಲ್ಲೇಖಿಸಿದ್ದಾರೆ. ಇದನ್ನು ಬಿಸಿಸಿಐ ಡಾಟ್ ಟಿವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

‘ಅವರು (ಮಯಾಂತಿ) ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಕ್ರಿಕೆಟ್ ನೇರಪ್ರಸಾರ ಮತ್ತು ಪ್ಯಾನೆಲ್ ಸಂವಾದಗಳನ್ನು ನಡೆಸಿಕೊಡುತ್ತಾರೆ. ಬಿಸಿಸಿಐ ಮತ್ತು ಐಪಿಎಲ್‌ ಪ್ರಸಾರ ಹಕ್ಕುಗಳನ್ನು ವಾಹಿನಿಗೆ 2018ರ ಏಪ್ರಿಲ್ 5 ಗಾಗೂ 2002ರ ಜೂನ್ 27ರಂದು ಲಭಿಸಿವೆ. ಮಯಾಂತಿ ಲ್ಯಾಂಗರ್ ಅವರು ಈ ವಾಹಿನಿಯ ಉದ್ಯೋಗಿಯಲ್ಲ. ಅವರು ಒಪ್ಪಂದದ ಮೇರೆಗೆ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೇ ಬಿನ್ನಿ ಅವರು ತಮ್ಮ ಅಧ್ಯಕ್ಷ ಸ್ಥಾನದ ಮೂಲಕ ಮಯಾಂತಿ ನೇಮಕಕ್ಕೆ ಪ್ರಭಾವ ಬೀರಿದ್ದಾರೆ ಎಂದೂ ಹೇಳಲಾಗದು. ಇದಕ್ಕೆ ಪೂರಕ ಸಾಕ್ಷ್ಯಾಧಾರಗಳಿಲ್ಲ. ಅವರು ಮಾವ–ಸೊಸೆ ಆಗಿರುವ ಮಾತ್ರಕ್ಕೇ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ ಸಾಬೀತಾಗುವುದಿಲ್ಲ’ ಎಂದು ಸರನ್ ಉಲ್ಲೇಖಿಸಿದ್ದಾರೆ.

‘ದೂರಿನೊಂದಿಗೆ ಸಲ್ಲಿಸಿದ ದಾಖಲೆಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬಾರದು. ತಾವು ಯಾರ ವಿರುದ್ಧ ದೂರು ಸಲ್ಲಿಸಿರುವರೋ ಆ ವ್ಯಕ್ತಿಗೆ ಮಾತ್ರ ಪ್ರತಿಗಳನ್ನು ಕಳಿಸಬಹುದು’ ಎಂದು ಸರನ್ ಅವರು ಸಂಜೀವ್ ಗುಪ್ತಾ ಅವರಿಗೆ ಎಚ್ಚರಿಕೆ ನೀಡಿದೆ.

ಈ ಹಿಂದೆ ಗುಪ್ತಾ ಅವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಖ್ಯಾತನಾಮರ ವಿರುದ್ಧ ಇಂತಹ ದೂರುಗಳನ್ನು ಸಲ್ಲಿಸಿದ್ದರು. ಪ್ರತಿ ಸಲವೂ ಬಿಸಿಸಿಐನ ಪ್ರಮುಖರು, ಸದಸ್ಯರು ಮತ್ತು ಮಾಧ್ಯಮಗಳಿಗೂ ದೂರು ಹಾಗೂ ದಾಖಲೆಗಳಪ್ರತಿಗಳನ್ನು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT