ಭಾನುವಾರ, ನವೆಂಬರ್ 29, 2020
24 °C

ಪಿಸಿಬಿಗೆ ಮೊದಲ ಮಹಿಳಾ ನಿರ್ದೇಶಕಿಯಾಗಿ ಆಲಿಯಾ ನೇಮಕ

ಎಪಿ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ಮೊದಲ ಬಾರಿ ಮಹಿಳಾ ನಿರ್ದೇಶಕಿಯೊಬ್ಬರನ್ನು ನೇಮಕ ಮಾಡಿದೆ. ಮಾನವ ಸಂಪನ್ಮೂಲ ಕಾರ್ಯನಿರ್ವಹಣಾಧಿಕಾರಿ ಆಲಿಯಾ ಜಾಫರ್‌ ಅವರನ್ನು ನಿರ್ದೇಶಕಿಯಾಗಿ ನೇಮಿಸಲಾಗಿದೆ.

ನಾಲ್ವರು ನಿರ್ದೇಶಕರಲ್ಲಿ ಆಲಿಯಾ ಒಬ್ಬರಾಗಿದ್ದಾರೆ. ಇನ್ನುಳಿದ ಮೂವರೆಂದರೆ ಹಣಕಾಸು ಕಾರ್ಯನಿರ್ಹಣಾಧಿಕಾರಿ ಜಾವೇದ್‌ ಖುರೇಷಿ, ಆರ್ಥಿಕ ತಜ್ಞ ಅಸೀಮ್‌ ವಜೀದ್‌ ಜವಾದ್‌ ಹಾಗೂ ಕಾರ್ಪೋರೇಟ್‌ ಕಾರ್ಯನಿರ್ವಾಹಣ ಆರೀಫ್‌ ಸಯೀದ್‌.

ಜಾಫರ್‌ ಹಾಗೂ ಜವಾದ್ ಅವರು ಎರಡು ವರ್ಷಗಳ ಅವಧಿಗೆ ಹುದ್ದೆಯಲ್ಲಿರಲಿದ್ದಾರೆ.

ಆಡಳಿತ ಮಂಡಳಿಯ ನಾಲ್ಕು ಸ್ವತಂತ್ರ ನಿರ್ದೇಶಕರ ಸ್ಥಾನಗಳಲ್ಲಿ ಒಂದನ್ನು ಮಹಿಳೆಗೆ ಮೀಸಲಾಗಿಡಬೇಕೆಂದು ಪಿಸಿಬಿ ಇತ್ತೀಚೆಗೆ ನಿಯಮ ರೂಪಿಸಿದೆ.

‘ನೂತನವಾಗಿ ನೇಮಕಗೊಂಡ ಸ್ವತಂತ್ರ ಸದಸ್ಯರನ್ನು, ಅದರಲ್ಲೂ ವಿಶೇಷವಾಗಿ ಮೊದಲ ಮಹಿಳಾ ಸ್ವತಂತ್ರ ನಿರ್ದೇಶಕಿ ಆಲಿಯಾ ಜಾಫರ್ ಸ್ವಾಗತಿಸುತ್ತೇನೆ. ಇದು ಆಡಳಿತ ಮಂಡಳಿಯ ರಚನೆಯಲ್ಲಿ ದೊಡ್ಡ ಹೆಜ್ಜೆಯಾಗಿದೆ‘ ಎಂದು ಪಿಸಿಬಿ ಅಧ್ಯಕ್ಷ ಎಹಸಾನ್‌ ಮಣಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು