ಭಾನುವಾರ ಬೆಳಿಗ್ಗೆ 6ರಿಂದ ಒಂದೂ ಹನಿ ಮಳೆ ಬರಲಿಲ್ಲ. ಆದರೆ ಪಿಚ್‌ಗಳು ತೇವವಾಗಿದ್ದವು. ಮೈದಾನದ ಕೆಲವು ಸ್ಥಳಗಳಲ್ಲಿ ನೀರು ನಿಂತಿತ್ತು. ಬೌಂಡರಿ ಲೈನ್ ಮತ್ತು ಬೌಲರ್‌ಗಳ ರನ್ ಅಪ್ ಕೂಡ ತೇವಗೊಂಡಿದ್ದವು. ಬೆಳಿಗ್ಗೆ 10, ಮಧ್ಯಾಹ್ನ 12 ಮತ್ತು 2 ಗಂಟೆಗೆ ಅಂಪೈರ್‌ಗಳು ಪಿಚ್ ಮತ್ತು ಹೊರಾಂಗಣ ಮೈದಾನ ಪರಿಶೀಲಿಸಿದರು. ಹೊರಾಂಗಣದಲ್ಲಿ ತೇವ ಹೆಚ್ಚಿರುವುದರಿಂದ ದಿನದಾಟ ರದ್ದು ಮಾಡಲಾಯಿತು. ಕ್ರೀಡಾಂಗಣ ಸಿಬ್ಬಂದಿಯ ಕಾರ್ಯವೈಖರಿಯೂ ಚುರುಕಾಗಿರಲಿಲ್ಲ. ಇದರಿಂದಾಗಿ ರಜೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ನಿರಾಶೆಗೊಂಡರು.