ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಭಜನ್–ಗೀತಾರಿಂದ ಐದು ಸಾವಿರ ಕುಟುಂಬಗಳಿಗೆ ಆಹಾರ

Last Updated 5 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ದಿಗ್ಬಂದನದಿಂದಾಗಿ ಸಂಕಷ್ಟದಲ್ಲಿರುವ ಜಲಂಧರ್‌ನ ಐದು ಸಾವಿರ ಕುಟುಂಬಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡುವುದಾಗಿ ಕ್ರಿಕೆಟಿಗ ಹರಭಜನ್ ಸಿಂಗ್ ಮತ್ತು ಅವರ ಪತ್ನಿ ಗೀತಾ ಬಸ್ರಾ ಅವರು ತಿಳಿಸಿದ್ದಾರೆ.

‘ಈ ಸಂಕಷ್ಟದ ಸಮಯದಲ್ಲಿ ನಾನು ಮತ್ತು ಗೀತಾ ಸೇರಿ ಐದು ಸಾವಿರ ಕುಟುಂಬಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತೇವೆ. ಸಹನಾಗರಿಕರೊಂದಿಗೆ ನಮ್ಮಲ್ಲಿ ಇರುವುದನ್ನು ಹಂಚಿಕೊಳ್ಳುವುದು ಕರ್ತವ್ಯ. ದೇವರ ದಯೆಯಿಂದ ಆ ಕಾರ್ಯವನ್ನು ನಾವು ಮಾಡುತ್ತೇವೆ’ ಎಂದು ಹರಭಜನ್ ತಿಳಿಸಿದ್ದಾರೆ.

‘ಜಲಂಧರ್ ನನ್ನ ತವರೂರು. ನಾನು ಮೊದಲು ದೌಲತಾಪುರಿಯಲ್ಲಿ ಇದದೆ. ಅಲ್ಲಿ ನನ್ನ ಬಹಳಷ್ಟು ಆಪ್ತಮಿತ್ರರು ಇದ್ದಾರೆ. ಅವರ ಮೂಲಕ ಇವತ್ತು 500 ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಿಸಲಾಗಿದೆ. ಜಲಂಧರ್ ಪೊಲೀಸ್ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ. ಅವರೂ ನಮ್ಮ ಕಾರ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ’ ಎಂದು ಮುಂಬೈನಲ್ಲಿರುವ ಹರಭಜನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT