ಭಾರತ ಕ್ರಿಕೆಟ್ ತಂಡದಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಅವರ ಸಂಗಾತಿ ನತಾಶಾ ಸ್ಟಾಂಕೊವಿಚ್ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
ನವಜಾತ ಶಿಶುವಿನ ಅಂಗೈ ಹಿಡಿದುಕೊಂಡಿರುವ ತಮ್ಮ ಕೈ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿರುವ ಹಾರ್ದಿಕ್, ’ದೇವರು ನಮಗೆ ಪುತ್ರನನ್ನು ಕರುಣಿಸಿದ್ದಾನೆ‘ ಎಂದು ಬರೆದಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಹಾರ್ದಿಕ್ ಮತ್ತು ನತಾಶಾ ಅವರ ನಿಶ್ಚಿತಾರ್ಥ ವಾಗಿತ್ತು. ನಂತರ ಅವರು ಜೊತೆಗಿದ್ದರು. ಹೋದ ಮೇ ತಿಂಗಳಲ್ಲಿ ನತಾಶಾ ಗರ್ಭಿಣಿಯಾಗಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಬಹಿರಂಗಪಡಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.