ನವಿ ಮುಂಬೈ: ದೀರ್ಘ ಕಾಲ ಗಾಯಳುವಾಗಿದ್ದ ಭಾರತ ಕ್ರಿಕೆಟ್ ತಂಡದ ಅಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇಲ್ಲಿ ನಡೆದ ಡಿ.ವೈ ಪಾಟೀಲ್ ಟಿ–20 ಕಪ್‌ನಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ತಂಡದ ವಿರುದ್ಧ ರಿಲಯನ್ಸ್ ಒನ್ ಪರ 22 ರನ್‌ಗಳಿಗೆ 2 ವಿಕೆಟ್ ಗಳಿಸುವ ಮೂಲಕ ಮಿಂಚಿದರು. ಈ ಪಂದ್ಯದಲ್ಲಿ ರಿಲಯನ್ಸ್ ತಂಡವು ಗೆಲುವು ಸಾಧಿಸಿತು.

ಕಳೆ ವರ್ಷ ಅಕ್ಟೋಬರ್‌ನಲ್ಲಿ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶದ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಅವರು ಪಾದದ ಗಾಯಕ್ಕೆ ತುತ್ತಾಗಿದ್ದರು. ಐಪಿಎಲ್‌ನಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿರುವ ಅವರು, ಕಮ್‌ಬ್ಯಾಕ್ ಮಾಡಲು ಕಾಯುತ್ತಿದ್ದರು.

ರಿಲಯನ್ಸ್ ಒನ್ ತಂಡದಲ್ಲಿ ತಿಲಕ್ ವರ್ಮಾ, ನೆಹಲ್ ವಧೇರ, ಆಕಾಶ್ ಮಧ್ವಾಲ್, ನಮನ್ ಧೀರ್ ಹಾಗೂ ಪಿಯೂಷ್ ಚಾವ್ಲಾ ಮುಂತಾದ ಮುಂಬೈ ಇಂಡಿಯನ್ಸ್ ತಂಡದ ಆಟಗಾರರೂ ಇದ್ದರು.

ಇದೊಂದು ಕಾರ್ಪೊರೇಟ್ ಟೂರ್ನಿಯಾಗಿದ್ದು, 16 ತಂಡಗಳು ಭಾಗವಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.