ನವದೆಹಲಿ: ಮಹಿಳೆಯರ ಕುರಿತು ಅಸಭ್ಯ ಮಾತುಗಳನ್ನಾಡಿದ್ದ ಟೀಂ ಇಂಡಿಯಾದ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್ ರಾಹುಲ್‌ಗೆ ಬಿಸಿಸಿಐನ ಓಂಬುಡ್ಸ್‌ಮನ್ ಡಿ.ಕೆ ಜೈನ್ ಅವರು ಇಬ್ಬರೂ ಆಟಗಾರರಿಗೆ ತಲಾ ₹20 ಲಕ್ಷ ದಂಡ ವಿಧಿಸಿದ್ದಾರೆ.
"ಕಾಫಿ ವಿತ್ ಕರಣ್' ಎಂಬ ಹಿಂದಿಯ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ಕೆಲ ತಿಂಗಳ ಹಿಂದೆಭಾಗವಹಿಸಿದ್ದ ಈ ಈರ್ವರು, ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅಶ್ಲೀಲ ಮಾತುಗಳನ್ನಾಡಿದ್ದರು. ಇದೇ ಹಿನ್ನೆಲೆಯಲ್ಲಿ ಬಿಸಿಸಿಐ ಈ ಇಬ್ಬರೂ ಆಟಗಾರರನ್ನು ಅಲ್ಪಾವಧಿಗೆ ಅಮಾನತು ಮಾಡಿ, ನಂತರ ಹಿಂಪಡೆದಿತ್ತು. ಆದರೆ,ಪ್ರಕಕರಣವನ್ನು ಮಾತ್ರ ಹೊಸದಾಗಿ ಓಂಬುಡ್ಸ್‌ಮನ್ ನೇಮಿಸಿ ಅವರಿಗೆ ವಹಿಸಿತ್ತು.
ಇಬ್ಬರೂ ಆಟಗಾರರ ವಿಚಾರಣೆ ನಡೆಸಿರುವ ಓಂಬುಡ್ಸ್‌ಮನ್ ಡಿ.ಕೆ ಜೈನ್, ತಲಾ 20 ದಂಡ ವಿಧಿಸಿದ್ದಾರೆ. ಓಂಬುಡ್ಸ್‌ಮನ್ ಆದೇಶವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ‘ಇಬ್ಬರೂ ಆಟಗಾರರಿಗೆ ದಂಡ ವಿಧಿಸಲಾಗಿದೆ. ತಮ್ಮ ತಪ್ಪಿಗೆ ಈಗಾಗಲೇ ತಾತ್ಕಾಲಿಕ ಅಮಾನತು ಶಿಕ್ಷೆಯನ್ನು ಇಬ್ಬರೂ ಆಟಗಾರರು ಅನುಭವಿಸಿದ್ದಾರೆ. ಅಲ್ಲದೆ, ಬೇಷರತ್ ಕ್ಷಮಾಪಣೆಯನ್ನೂ ಕೋರಿದ್ದಾರೆ. ಒನ್ನು ಮುಂದೆ ಇನ್ಯಾವ ಶಿಕ್ಷೆಯನ್ನೂ ವಿಧಿಸುವುದಿಲ್ಲ,’ ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
BCCI Ombudsman directs KL Rahul & Hardik Pandya to pay Rs1,00,000 each to families of 10 constables in para-military forces who have lost their lives on duty & Rs 10,00,000 in the fund created by Cricket Association for the blind,for promotion of game for the blind,within 4 weeks https://t.co/Ju7Zgvwsit
— ANI (@ANI) April 20, 2019
ಇಬ್ಬರೂ ಆಟಗಾರರು ಪಾವತಿಸುವದಂಡದ ಮೊತ್ತವನ್ನು ಬಿಸಿಸಿಐ ಎರಡು ಬಗೆಗಳಲ್ಲಿ ಸದ್ವಿನಿಯೋಗ ಮಾಡುತ್ತಿದೆ.ದೇಶ ಸೇವೆ ವೇಳೆ ಹುತಾತ್ಮರಾದ ಅರೆಸೇನಾ ಪಡೆಯ 10 ಸಿಬ್ಬಂದಿಯ ವಿಧವಾ ಪತ್ನಿಯರಿಗೆ ತಲಾ ಒಂದೊಂದು ಲಕ್ಷ ಹಣ ನೀಡಬೇಕು. ಈ ಹಣ ಈಗ ವಿಧಿಸಿರುವ 20 ಲಕ್ಷ ದಂಡದ ಮೊತ್ತದಲ್ಲಿಯೇ ನೀಡಬೇಕು ಎಂದು ಓಂಬುಡ್ಸ್‌ಮನ್ ತಿಳಿಸಿದ್ದಾರೆ. ಅದಲ್ಲದೇ, ಬಿಸಿಸಿಐ ಸ್ಥಾಪಿಸಿರುವ ಅಂದ ಕ್ರಿಕೆಟರ್‌ಗಳ ಅಸೋಸಿಯೇಷನ್‌ಗೆ ಇಬ್ಬರೂ ಆಟಗಾರರು ತಲಾ 10 ಲಕ್ಷ ಹಣವನ್ನು ಠೇವಣಿಯಾಗಿ ನೀಡಬೇಕು ಎಂದೂ ಅವರು ಆದೇಶಿಸಿದ್ದಾರೆ.
ಈ ದಂಡದ ಮೊತ್ತವನ್ನು ಇನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಕು ಎಂದೂ ಓಬುಡ್ಸ್‌ಮನ್ ಆದೇಶಿಸಿದ್ದಾರೆ.
ವಿವಾದವೇನು:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.