ಹರ್ಮನ್ ಪರ ಎಡುಲ್ಜಿ ಬ್ಯಾಟಿಂಗ್

7

ಹರ್ಮನ್ ಪರ ಎಡುಲ್ಜಿ ಬ್ಯಾಟಿಂಗ್

Published:
Updated:
Deccan Herald

ನವದೆಹಲಿ: ರಮೇಶ್ ಪೊವಾರ್ ಅವರೇ ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಬೇಕು ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

ಪುರುಷರ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ರವಿಶಾಸ್ತ್ರಿಯವರನ್ನೇ ಕೋಚ್ ಆಗಿ ಮುಂದುವರಿಸುವಂತೆ ಹೇಳಿದ್ದಾರೆ. ಅದಕ್ಕೆ ಸಮ್ಮತಿಯೂ ಸಿಕ್ಕಿದೆ. ಆದ್ದರಿಂದ ಹರ್ಮನ್ ಮಾತಿಗೂ ಬೆಂಬಲ ಸಿಗಬೇಕು ಎಂದು ಕ್ರಿಕೆಟ್ ಆಡಳಿತ ಸಮಿತಿ ಸದಸ್ಯ ಡಯಾನಾ ಎಡುಲ್ಜಿ ಹೇಳಿದ್ದಾರೆ.

ಕೋಚ್ ಆಯ್ಕೆಯ ಕುರಿತು ಸಿಒಎ ಮುಖ್ಯಸ್ಥ ವಿನೋದ್ ರಾಯ್ ಮತ್ತು ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಜೊಹ್ರಿ ಅವರಿಗೆ ಎಡುಲ್ಜಿ ಪತ್ರ ಬರೆದಿದ್ದಾರೆ.

‘ಕೋಚ್ ಕುರಿತು ಆಟಗಾರ್ತಿಯರು ಇ ಮೇಲ್ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಅವರು ತಮ್ಮ ನೈಜ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವುದು ಉತ್ತಮ ಬೆಳವಣಿಗೆ. ವಿರಾಟ್ ಅವರು ಸಿಎಒಗೆ ಆಗಾಗ ಎಸ್‌ಎಂಎಸ್ ಕಳಿಸುತ್ತಾರೆ. ಅದರ ಮೇಲೆಯೇ ಪುರುಷರ ತಂಡದ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಡುಲ್ಜಿ ಹೇಳಿದ್ದಾರೆ.

‘ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸದಿದ್ದರೂ ರವಿಶಾಸ್ತ್ರಿ ಅವರಿಗೆ ಮನ್ನಣೆ ನೀಡಲಾಯಿತು. ಕುಂಬ್ಳೆ ಬಹಳ ಗೌರವಾನ್ವಿತ ದಿಗ್ಗಜ ಕ್ರಿಕೆಟಿಗ. ಅವರು ತಮ್ಮದೇ ಆದ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಅವರನ್ನು ಖಳನಾಯಕನಂತೆ ಬಿಂಬಿಸಲಾಯಿತು. ನಾನು ಕುಂಬ್ಳೆಯವರನ್ನು ಗೌರವಿಸುತ್ತೇನೆ. ಅವರನ್ನು ಬದಲಿಸಿದಾಗಲೂ ನಾನು ಪ್ರತಿಭಟಿಸಿದ್ದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !