ಅಡಿಲೇಡ್: ಭಾರತದ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಮಹಿಳಾ ಬಿಗ್ ಬ್ಯಾಷ್ ಲೀಗ್ನ ‘ಟೂರ್ನಿಯ ತಂಡ‘ದಲ್ಲಿ ಸ್ಥಾನ ಪಡೆದಿದ್ದಾರೆ. ಈ ಋತುವಿನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ಪರ ತೋರಿದ ಆಲ್ರೌಂಡ್ ಸಾಮರ್ಥ್ಯದಿಂದಾಗಿ ಅವರು ಸ್ಥಾನ ಗಳಿಸಿದ್ದಾರೆ.

ಹರ್ಮನ್ಪ್ರೀತ್ ಅವರು ರೆನೆಗೇಡ್ಸ್ ಪರ ಈ ಆವೃತ್ತಿಯಲ್ಲಿ 399 ರನ್ ಗಳಿಸಿದ್ದಾರೆ. ಅದರಲ್ಲಿ ಮೂರು ಅರ್ಧಶತಕಗಳು ಸೇರಿವೆ. 135.25ರ ಸರಾಸರಿಯಲ್ಲಿ ಅವರು ಬ್ಯಾಟ್ ಬೀಸಿದ್ದಾರೆ.

ಕಳೆದ ವಾರ ಸಿಡ್ನಿ ಥಂಡರ್ಸ್ ಎದುರು ಔಟಾಗದೆ 81 ರನ್ ಗಳಿಸಿದ್ದು, ಹರ್ಮನ್ಪ್ರೀತ್ ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು. ಇದುವರೆಗೆ ಟೂರ್ನಿಯಲ್ಲಿ ಅತ್ಯಧಿಕ 18 ಸಿಕ್ಸರ್ಗಳನ್ನು ಅವರು ಸಿಡಿಸಿದ್ದಾರೆ.

ತಂಡದ ತಾರಾ ಲೆಗ್ ಸ್ಪಿನ್ನರ್ ಜಾರ್ಜಿಯಾ ವೇರ್ಹ್ಯಾಮ್ ಗಾಯದ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆದ ಬಳಿಕ ಕೌರ್ ಬೌಲಿಂಗ್ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. 32ರ ಹರೆಯದ ಆಟಗಾರ್ತಿ 15 ವಿಕೆಟ್ ಕಬಳಿಸಿದ್ದಾರೆ. 22 ರನ್ಗಳಿಗೆ ಮೂರು ವಿಕೆಟ್ ಕಬಳಿಸಿದ್ದು ಅವರ ಶ್ರೇಷ್ಠ ಬೌಲಿಂಗ್ ಆಗಿದೆ.

ನ್ಯೂಜಿಲೆಂಡ್ ಆಲ್ರೌಂಡರ್ ಸೋಫಿ ಡಿವೈನ್ ‘ಟೂರ್ನಿಯ ತಂಡ‘ದಲ್ಲಿರುವ ಇನ್ನೋರ್ವ ಪ್ರಮುಖ ಆಟಗಾರ್ತಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.