ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರೆಂಟ್‌ ರಾಕೆಟ್ಸ್‌ ಪರ ಆಡಲಿರುವ ಹರ್ಮನ್‌ಪ್ರೀತ್‌

Last Updated 24 ಮಾರ್ಚ್ 2023, 19:21 IST
ಅಕ್ಷರ ಗಾತ್ರ

ಲಂಡನ್‌: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ಇಂಗ್ಲೆಂಡ್‌ನಲ್ಲಿ ನಡೆಯುವ ‘ದಿ ಹಂಡ್ರೆಡ್‌’ ಟಿ20 ಲೀಗ್‌ನಲ್ಲಿ ಟ್ರೆಂಟ್‌ ರಾಕೆಟ್ಸ್‌ ಪರ ಆಡಲಿದ್ದಾರೆ.

ದಿ ಹಂಡ್ರೆಡ್‌ ಲೀಗ್‌ಗೆ ಆಟಗಾರರು ಮತ್ತು ಆಟಗಾರ್ತಿಯರ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು. ಸ್ಮೃತಿ ಮಂದಾನ ಅವರನ್ನು ಸದರ್ನ್‌ ಬ್ರೇವ್‌ ತಂಡ ತನ್ನಲ್ಲೇ ಉಳಿಸಿಕೊಂಡಿದೆ.

ಪುರುಷ ಮತ್ತು ಮಹಿಳಾ ತಂಡಗಳ ಒಟ್ಟು 64 ಸ್ಥಾನಗಳನ್ನು ತುಂಬಲು ಹರಾಜು ಪ್ರಕ್ರಿಯೆ ನಡೆಯಿತು. ಮಹಿಳಾ ತಂಡಗಳಿಗೆ ಇದೇ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ನಡೆದಿದೆ.

ಪುರುಷರ ವಿಭಾಗದಲ್ಲಿ ಪಾಕಿಸ್ತಾನದ ಶಾಹೀನ್ ಶಾ ಆಫ್ರಿದಿ ಮತ್ತು ಹ್ಯಾರಿಸ್ ರವೂಫ್‌ ಅವರನ್ನು ವೆಲ್ಶ್ ಫೈರ್‌ ತಂಡ ತನ್ನದಾಗಿಸಿಕೊಂಡಿತು. ಪ್ರಮುಖ ಆಟಗಾರರಾದ ಪಾಕ್‌ ತಂಡದ ನಾಯಕ ಬಾಬರ್‌ ಅಜಂ, ವೆಸ್ಟ್‌ ಇಂಡೀಸ್‌ನ ಕೀರನ್‌ ಪೊಲಾರ್ಡ್‌ ಮತ್ತು ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ ಅವರನ್ನು ಕೊಳ್ಳಲು ಯಾವುದೇ ತಂಡ ಆಸಕ್ತಿ ತೋರಲಿಲ್ಲ.

2023ರ ದಿ ಹಂಡ್ರೆಡ್‌ ಟೂರ್ನಿ ಆ.1 ರಂದು ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT