ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2022 - MI vs DC | ರೋಹಿತ್–ಪಂತ್ ಹಣಾಹಣಿಗೆ ವೇದಿಕೆ ಸಿದ್ಧ

ಮುಂಬೈ ಇಂಡಿಯನ್ಸ್–ಡೆಲ್ಲಿ ಕ್ಯಾಪಿಟಲ್ ಮುಖಾಮುಖಿ ಇಂದು
Last Updated 26 ಮಾರ್ಚ್ 2022, 18:56 IST
ಅಕ್ಷರ ಗಾತ್ರ

ಮುಂಬೈ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಇನ್ನೂ ಒಂದು ಸಲವೂ ಪ್ರಶಸ್ತಿ ಜಯಿಸದ ಡೆಲ್ಲಿ ಕ್ಯಾಪಿಟಲ್ಸ್‌ ಭಾನುವಾರ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಮುಂಬೈಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್‌ಕೀಪರ್ ರಿಷಭ್ ಪಂತ್ ಡೆಲ್ಲಿ ತಂಡದ ಮುಂದಾಳತ್ವ ವಹಿಸುತ್ತಿದ್ದಾರೆ. ರೋಹಿತ್ ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿಕೊಂಡ ನಂತರ ಆಡುತ್ತಿರುವ ಮೊದಲ ಐಪಿಎಲ್ ಪಂದ್ಯ ಇದಾಗಿದೆ.

ಮೆಗಾ ಹರಾಜಿನಲ್ಲಿ ದುಬಾರಿ ಬೆಲೆ ಗಳಿಸಿದ ಇಶಾನ್ ಕಿಶಾನ್ (₹ 15.25 ಕೋಟಿ) ಮುಂಬೈ ತಂಡದ ಬ್ಯಾಟಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ. ರೋಹಿತ್ ಮತ್ತು ಇಶಾನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಗಾಯಗೊಂಡಿರುವುದರಿಂದ ಈ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಅವರ ಜಾಗದಲ್ಲಿ ಫ್ಯಾಬಿಯನ್ ಅಲೆನ್ ಆಡುವುದು ಬಹುತೇಕ ಖಚಿತವಾಗಿದೆ. ಬ್ಯಾಟಿಂಗ್‌ನಲ್ಲಿ ಕೀರನ್ ಪೊಲಾರ್ಡ್ ಬಿಟ್ಟರೆ ಉಳಿದವರೆದಲ್ಲರೂ ಹೊಸಬರೇ ಆಗಿದ್ದಾರೆ.

ವೇಗಿ ಜಸ್‌ಪ್ರೀತ್ ಬೂಮ್ರಾ ಬೌಲಿಂಗ್ ಪಡೆಯ ಸಾರಥ್ಯ ವಹಿಸುವರು. ಅವರೊಂದಿಗೆ ಜಯದೇವ್ ಉನದ್ಕತ್ ಜೊತೆಗೂಡುವರು.

ಪ್ರಸ್ತುತ ಮುಂಬೈ ತಂಡಕ್ಕಿಂತ ಡೆಲ್ಲಿ ತಂಡವೇ ಹೆಚ್ಚು ಸಮತೋಲನದಿಂದ ಕೂಡಿದಂತೆ ಕಾಣುತ್ತಿದೆ. ಡೇವಿಡ್ ವಾರ್ನರ್ ಅವರು ಇನ್ನೂ ತಂಡವನ್ನು ಕೂಡಿಕೊಂಡಿಲ್ಲ. ಆದ್ದರಿಂದ ರಿಷಭ್ ಮತ್ತು ಪೃಥ್ವಿ ಶಾ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಸರ್ಫರಾಜ್ ಖಾನ್, ಯುವ ಬ್ಯಾಟರ್ ಯಶ್ ಧುಳ್, ಬೌಲರ್‌ಗಳಾದ ಎನ್ರಿಚ್ ನಾಕಿಯಾ, ಲುಂಗಿ ಗಿಡಿ, ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ತಂಡದ ಶಕ್ತಿ ಹೆಚ್ಚಿಸಿದ್ದಾರೆ. ಇದರಿಂದಾಗಿ ರೋಹಿತ್ ಬಳಗಕ್ಕೆ ಕಠಿಣ ಸವಾಲೊಡ್ಡುವ ವಿಶ್ವಾಸದಲ್ಲಿ ಡೆಲ್ಲಿ ತಂಡವಿದೆ.

ಮಧ್ಯಾಹ್ನವೇ ಪಂದ್ಯ ಆರಂಭವಾಗಿ ಮುಸ್ಸಂಜೆಗೆ ಮುಗಿಯುವುದರಿಂದ ಇಬ್ಬನಿ ಸಮಸ್ಯೆ ಇರುವುದಿಲ್ಲ. ಆದ್ದರಿಂದ ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡುವತ್ತ ಮನಸ್ಸು ಮಾಡಬಹುದು.

ತಂಡಗಳು:

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಅನ್ಮೋಲ್‌ಪ್ರೀತ್ ಸಿಂಗ್, ರಾಹುಲ್ ಬುಧಿ, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಟಿಮ್ ಡೇವಿಡ್, ಅರ್ಜುನ್ ತೆಂಡೂಲ್ಕರ್, ಬಾಸಿಲ್ ಥಂಪಿ, ಹೃತಿಕ್ ಶೋಕಿನ, ಜಸ್‌ಪ್ರೀತ್ ಬೂಮ್ರಾ, ಜಯದೇವ್ ಉನದ್ಕತ್, ಮಯಂಕ್ ಮಾರ್ಕಂಡೆ, ಮುರುಗನ್ ಅಶ್ವಿನ್, ರಿಲೀ ಮೆರೆಡಿತ್, ಟೈಮಲ್ ಮಿಲ್ಸ್, ಅರ್ಷದ್ ಖಾನ್, ಡೇನಿಯಲ್ ಸ್ಯಾಮ್ಸ್, ಡಿವಾಲ್ಡ್ ಬ್ರೆವಿಸ್, ಫ್ಯಾಬಿಯನ್ ಅಲೆನ್, ಕೀರನ್ ಪೊಲಾರ್ಡ್, ಸಂಜಯ್ ಯಾದವ್, ಆರ್ಯನ್ ಜುಯಾಲ್.

ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನ್, ಪೃಥ್ವಿ ಶಾ, ಮನದೀಪ್ ಸಿಂಗ್, ರೋವ್ಮನ್ ಪೊವೆಲ್. ಎನ್ರಿಚ್ ನಾಕಿಯಾ, ಚೇತನ್ ಸಕಾರಿಯಾ, ಖಲೀಲ್ ಅಹಮದ್, ಕುಲದೀಪ್ ಯಾದವ್, ಲುಂಗಿ ಗಿಡಿ, ಮುಸ್ತಫೀಜರ್ ರೆಹಮಾನ್, ಶಾರ್ದೂಲ್ ಠಾಕೂರ್, ಅಶ್ವಿನ್ ಹೆಬ್ಬಾರ್, ಅಕ್ಷರ್ ಪಟೇಲ್, ಕಮಲೇಶ್ ನಾಗರಕೋಟಿ, ಲಲಿತ್ ಯಾದವ್, ಮಿಚೆಲ್ ಮಾರ್ಷ್, ಪ್ರವೀಣ ದುಬೆ, ರಿಪಲ್ ಪಟೇಲ್, ಸರ್ಫರಾಜ್ ಖಾನ್, ವಿಕಿ ಓಸ್ವಾಲ್, ಯಶ್ ಧುಳ್, ಕೆ.ಎಸ್. ಭರತ್, ಟಿಮ್ ಸೀಫರ್ಟ್.

ಪಂದ್ಯ ಆರಂಭ: ಮಧ್ಯಾಹ್ನ 3.30.

**

ಮುಂದಿನ ವರ್ಷ ಮಹಿಳಾ ಐಪಿಎಲ್‌:ಸೌರವ್ ಗಂಗೂಲಿ
ಮುಂದಿನ ವರ್ಷ ಮಹಿಳೆಯರ ಐಪಿಎಲ್ ಟೂರ್ನಿಗೆ ಚಾಲನೆ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

‘ಮಹಿಳಾ ಐಪಿಎಲ್‌ಗೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಲಭಿಸಿದೆ. ಮುಂದಿನ ವರ್ಷ ಆರಂಭಿಸುವುದು ಬಹುತೇಕ ಖಚಿತ’ ಎಂದು ಗಂಗೂಲಿ ಹೇಳಿದ್ದಾರೆ. ‘ಮಹಿಳಾ ಐಪಿಎಲ್ ಪ್ರಕ್ರಿಯೆಗಳು ಆರಂಭಗೊಂಡಿದ್ದು ಐದರಿಂದ ಆರು ತಂಡಗಳು ಪಾಲ್ಗೊಳ್ಳಲಿವೆ’ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT