ಬುಧವಾರ, ಏಪ್ರಿಲ್ 14, 2021
26 °C

ಕ್ರಿಕೆಟ್‌: ಫೈನಲ್‌ಗೆ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ, ಒಂದು ರನ್‌ ಅಂತರದ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರೋಚಕ ಹೋರಾಟಕ್ಕೆ ಕಾರಣವಾದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ‘ಪಿಆರ್‌ಎನ್‌’ ಟ್ರೋಫಿ ಅಂತರ ಕ್ಯಾಂಪ್‌ಗಳ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ನಾಕೌಟ್‌ ಹಂತದ ಪಂದ್ಯವನ್ನು ತಲಾ 50 ಓವರ್‌ ನಡೆಸುವುದಾಗಿ ಸಂಘಟಕರು ಮೊದಲು ತಿಳಿಸಿದ್ದರು. ಗುರುವಾರ ಮಳೆ ಸುರಿದ ಕಾರಣ ಹಾಗೂ ಶುಕ್ರವಾರ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿದ್ದರಿಂದ ಪಂದ್ಯವನ್ನು ತಲಾ 23 ಓವರ್‌ಗಳಿಗೆ ಕಡಿತಗೊಳಿಸಲಾಯಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಎಚ್‌ಸಿಎ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 126 ರನ್‌ ಕಲೆಹಾಕಿತು. ಅನ್ಮೋಲ್‌ ಪಗಾಡ್‌ (35) ಮತ್ತು ಮಣಿಕಂಠ ಎಸ್‌. ಬುಕಿಟಗಾರ (25) ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು.

ಎದುರಾಳಿ ಹುಬ್ಬಳ್ಳಿ ಕೋಲ್ಟ್ಸ್‌ ತಂಡ 22.5 ಓವರ್‌ಗಳಲ್ಲಿ 125 ರನ್‌ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಈ ತಂಡದ ಆದರ್ಶ ಸುರೇಬಾನ್‌ (40) ಮತ್ತು ಮಾಧವ ಡಿ. (33) ಉತ್ತಮ ಹೋರಾಟ ತೋರಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಎಚ್‌ಸಿಎ ತಂಡದ ಆದಿತ್ಯ ಯ. ಹಾಗೂ ಮಣಿಕಂಠ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ಜಯ ತಂದುಕೊಡುವಲ್ಲಿ ಪ್ರಮುಖ ಕಾರಣರಾದರು. ಅತಿಥಿಯಾಗಿ ಬಂದಿದ್ದ ಅರ್ಜುನ ಪಾಟೀಲ ಅವರು ಮಣಿಕಂಠಗೆ ಪಂದ್ಯ ಶ್ರೇಷ್ಠ ಗೌರವ ನೀಡಿದರು.

ಶನಿವಾರ ನಡೆಯುವ ಎರಡನೇ ಸೆಮಿಫೈನಲ್‌ನಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಮತ್ತು ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ (ವಿಎಂಸಿಎ) ಪೈಪೋಟಿ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ಪಡೆಯುವ ತಂಡ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಎಚ್‌ಸಿಎ ವಿರುದ್ಧ ಪಂದ್ಯವಾಡಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು